ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲೆಯ ವಿವಿಧ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ.. ಅಭಿಮಾನಿಗಳಿಂದ ಸನ್ಮಾನ - ವಿಜಯಪುರ ಜಿಲ್ಲೆಯ ವಿವಿಧ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬ. ಸಾಲವಾಡಗಿ ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗ್ರಾಮದ ಲಿಂಗಯ್ಯ ಮುತ್ಯಾನ ಗದ್ದಿಗೆಯ ದರ್ಶನ ಪಡೆದರು.

ವಿಜಯಪುರ ಜಿಲ್ಲೆಯ ವಿವಿಧ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ
ವಿಜಯಪುರ ಜಿಲ್ಲೆಯ ವಿವಿಧ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

By

Published : Jul 14, 2022, 8:17 PM IST

ವಿಜಯಪುರ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಜಿಲ್ಲೆಯ ಬ. ಸಾಲವಾಡಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಬ. ಸಾಲವಾಡಗಿ ಗ್ರಾಮಕ್ಕೆ ಮಧ್ಯಾಹ್ನ ಯಾದಗಿರಿಯಿಂದ ಆಲಮಟ್ಟಿಗೆ ತೆರಳುತ್ತಿರುವ ಮಾರ್ಗ ಮಧ್ಯದಲ್ಲಿ ಭೇಟಿಯಾದರು.

ವಿಜಯಪುರ ಜಿಲ್ಲೆಯ ವಿವಿಧ ಸ್ಥಳಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ

ಗ್ರಾಮದ ಲಿಂಗಯ್ಯ ಮುತ್ಯಾನ ಗದ್ದಿಗೆಯ ದರ್ಶನ ಪಡೆದ ಸಿದ್ದರಾಮಯ್ಯ ಆರ್ಶೀವಾದ ಪಡೆದರು. ಈ ವೇಳೆ ಗ್ರಾಮಸ್ಥರು, ಅಭಿಮಾನಿಗಳಿಂದ ಸಿದ್ಧರಾಮಯ್ಯಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು. ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರು ಮುಗಿಬಿದ್ದಿದ್ದರು. ಅವರ ಪರ ಘೋಷಣೆ ಕೂಗಿ ಜೈಕಾರ ಹಾಕಿದರು.

ನಂತರ ತಾಳಿಕೋಟೆಯಲ್ಲೂ ಅಭಿಮಾನಿಗಳನ್ನು ಭೇಟಿ ಮಾಡಿದಾಗ ಯುವಕರದ್ದು ಸಿದ್ಧರಾಮಯ್ಯ ಪರ ಕ್ರೇಜ್ ಮುಗಿಲು ಮುಟ್ಟಿತ್ತು. ಅವರ ವಾಹನಕ್ಕೆ ಅಡ್ಡಗಟ್ಟಿ ಹಾರ ಹಾಕಿ,‌ ಶಾಲು ಹೊದಿಸಿ ಸನ್ಮಾನಿಸಲಾಯಿತು. ನಂತರ ಅಭಿಮಾನಿಗಳತ್ತ ಕೈಬೀಸಿದ ಸಿದ್ಧರಾಮಯ್ಯ ಆಲಮಟ್ಟಿಗೆ ತೆರಳಿದರು.

ಇಂದು ಯಾದಗಿರಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ನಂತರ ಮುದ್ದೇಬಿಹಾಳ ಮಾರ್ಗವಾಗಿ ಆಲಮಟ್ಟಿಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ. ನಾಳೆ ಬಾದಾಮಿಯಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಓದಿ:ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ ನಲ್ಲಿಯೇ ನಡುಕ ಶುರುವಾಗಿದೆ.. ಶೆಟ್ಟರ್ ಅಪಹಾಸ್ಯ

For All Latest Updates

TAGGED:

ABOUT THE AUTHOR

...view details