ಮುದ್ದೇಬಿಹಾಳ:ಸನ್ 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣಾ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಟ್ರಾನ್ಸ್ಫರ್ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದೆ ಎಂದು ಬಿಇಓ ವೀರೇಶ ಜೇವರಗಿ ತಿಳಿಸಿದರು.
ಹೆಲ್ಪ್ ಡೆಸ್ಕ್ ಮಾಹಿತಿ:
ವೀರೇಶ ಜೇವರಗಿ ಬಿಇಒ - 9480695097, ಎ.ಎಸ್. ಹಾಲ್ಯಾಳ ವ್ಯವಸ್ಥಾಪಕರು - 9980518338, ಎ.ಎಸ್. ಬಾಗವಾನ (ಪ್ರೌಢಶಾಲಾ ವಿಭಾಗ) - 9060842370, ಹೆಚ್.ಎ. ಮೇಟಿ (ಪ್ರಾಥಮಿಕ ಶಾಲಾ ವಿಭಾಗ) - 9902810917, ಎನ್.ಬಿ.ರೂಢಗಿ - 9845522936, ಸಂತೋಷ ಬಂದೆ - 9845304980, ಸುರೇಶ ಮುರಗಾನವರ - 9845730678 (ಪ್ರಾಥಮಿಕ ವಿಭಾಗ), ಎನ್.ಎಸ್. ಕಂಠಿ - 9945980482, ಸಿದ್ದನಗೌಡ ಪಾಟೀಲ - 9741720193 ಪ್ರೌಢಶಾಲಾ ವಿಭಾಗ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಬುಧವಾರ ವರ್ಗಾವಣಾ ಪ್ರಕಿಯೆ ಸುಗಮವಾಗಿ ಸಾಗಲು ವರ್ಗಾವಣಾ ಕೋಶ ರಚನೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಸಾಮಾನ್ಯ ವರ್ಗಾವಣೆ ಬಯಸುವ ತಾಲೂಕಿನ ಶಿಕ್ಷಕ ಸಮುದಾಯದವರು ತಮ್ಮ ವರ್ಗಾವಣಾ ಅರ್ಜಿಗಳನ್ನು ಹಾಕುವಾಗ ಏನಾದರೂ ತೊಂದರೆಯಾದರೆ ಹೆಲ್ಪ್ ಡೆಸ್ಕ್ನ್ನು ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ದೂರವಾಣಿ, ಖುದ್ದಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪ್ರೌಢಶಾಲಾ ವರ್ಗಾವಣೆ ನೋಡಲ್ ಅಧಿಕಾರಿ ಎ.ಎಸ್.ಬಾಗವಾನ, ಪ್ರಾಥಮಿಕ ಶಾಲಾ ವರ್ಗಾವಣಾ ನೋಡಲ್ ಅಧಿಕಾರಿ ಹೆಚ್.ಎ.ಮೇಟಿ, ಸಿಬ್ಬಂದಿ ಎ.ಎಸ್.ಹಾಲ್ಯಾಳ ಇದ್ದರು.