ವಿಜಯಪುರ:ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಮೂರು ದಿನ ಕಾಲ ನಡೆಯುವ, ಫಲಪುಷ್ಪ ಪ್ರದರ್ಶನಕ್ಕೆ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು.
ವಿಜಯಪುರದಲ್ಲಿ ಫಲಪುಷ್ಪ ಪ್ರದರ್ಶನ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಂದ ಚಾಲನೆ - Flower Show in Vijayapura
ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಮೂರು ದಿನ ಕಾಲ ನಡೆಯುವ, ಫಲಪುಷ್ಪ ಪ್ರದರ್ಶನಕ್ಕೆ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಚಾಲನೆ ನೀಡಿದರು.

ನಗರದ ತೋಟಗಾರಿಕಾ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಮೂರು ದಿನಗಳ ಮೇಳ ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಎಲ್ಲವೂ ಪ್ರಕೃತಿಯ ಸೃಷ್ಟಿ ಬರುವುದು. ಇಂದು ಪ್ರದರ್ಶನದ ಮೂಲಕ ಬರದ ನಾಡಲ್ಲಿ ಬಂಗಾರ ಬೆಳೆಯಲು ನಮ್ಮ ಜಿಲ್ಲೆಯ ರೈತರು ಮುಂದಾಗಿದ್ದಾರೆ ಎಂದರು.
ರೈತರು ಹೆಚ್ಚು ಬೆಳೆಯನ್ನು ಬೆಳೆಯುವುದರಿಂದ ನಾಡು ಹಸಿರಾಗುತ್ತದೆ. ರೈತರು ಉತ್ತಮವಾದ ಸಾವಯುವ ಪದ್ಧತಿ ಅಳವಡಿಕೆ ಮಾಡಿಕೊಂಡು ಕೃಷಿ ಮುಂದಾಗುತ್ತಿದ್ದಾರೆ ಎಂದರು. ಬರುವ ದಿನಗಳಲ್ಲಿ ವಿಜಯಪುರ ವಿಜಯದ ಪುರವಾಗಲಿದೆ ಎಂದು ಆರ್ಶೀವಚನ ನೀಡಿದರು. ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಭಾಗಿಯಾಗಿದ್ರು.