ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲೆಯ ಯಾವ-ಯಾವ ಗ್ರಾಮದಲ್ಲಿ ಪ್ರವಾಹ ಭೀತಿ?

ಕೃಷ್ಣಾ ನದಿ (ಆಲಮಟ್ಟಿ ಜಲಾಶಯ)ಯಲ್ಲಿ ದಾಖಲೆಯ ಒಟ್ಟು 5.50 ಲಕ್ಷ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದ್ದು, ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಹಲವು ಗ್ರಾಮಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿವೆ.

flooding-in-vijayapur-district

By

Published : Aug 10, 2019, 11:30 AM IST

ವಿಜಯಪುರ: ರಾಜ್ಯದಲ್ಲಿ ಮಳೆ ಇಲ್ಲದಿದ್ದರೂ ಸಹ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದ ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಕೃಷ್ಣಾ ನದಿ (ಆಲಮಟ್ಟಿ ಜಲಾಶಯ)ಯಲ್ಲಿ ದಾಖಲೆಯ ಒಟ್ಟು 5.50 ಲಕ್ಷ ಕ್ಯೂಸೆಕ್ ಪ್ರಮಾಣದಲ್ಲಿ ನೀರನ್ನು ಹರಿಸಲಾಗುತ್ತಿದ್ದು, ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಹಲವು ಗ್ರಾಮಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತಿವೆ.

ವಿಜಯಪುರ ಜಿಲ್ಲೆಯಲ್ಲಿ ಪ್ರವಾಹ ಭೀತಿ..

ಮುದ್ದೇಬಿಹಾಳ ತಾಲೂಕಿನ ಬಿಜ್ಜೂರ, ಖಾನಿಕೇರಿ, ಸುಲ್ತಾನಪುರ, ಲೋಟಗೇರಿ, ಘಾಲಪೂಜಿ, ಬಂಗಾರಗುಂಡ, ಬಲದಿನ್ನಿ, ಕಪನೂರ, ಮೂದೂರ, ಕಮಲದಿನ್ನಿ, ಇಂಗಳಗಿ, ಟಕ್ಕಳಕಿ, ಕಾರಕೂರ, ಕುಂಚಗನೂರ, ಮದರಿ, ರಕ್ಕಸಗಿ, ದೇವೂರ, ಗಂಗೂರ, ಅಂಡರಗಲ್, ಕಂದಗನೂರ ಹಾಗೂ ನಾಗರಾಳ ಗ್ರಾಮ ಮತ್ತು ನಿಡಗುಂದಿ ತಾಲೂಕಿನ ಅರಳದಿನ್ನಿ, ಯಲಗೂರ, ಬೂದಿಹಾಳ, ಮಸೂತಿ ಹಾಗೂ ಕಾಸಿನಕುಂಟೆ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ.

ಭೀಮಾ ನದಿಯಲ್ಲಿ ಅಂದಾಜು 2.00 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಾದ ಚಡಚಣ ತಾಲೂಕಿನ ಚಣೆಗಾಂವ, ನೀವರಗಿ, ಉಮರಜ, ರೇವತಗಾಂವ, ದಸೂರ, ಸಂಕ, ಅಣಚಿ, ಟಾಕಳಿ, ಧೂಳಖೇಡ, ಹತ್ತಳ್ಳಿ, ಶಿರನಾಳ, ಮರಗೂರ, ಹಾವಿನಾಳ, ಕೆರೂರ, ತದ್ದೇವಾಡಿ ಹಾಗೂ ಹಲಸಂಗಿ ಗ್ರಾಮಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ.

ಇಂಡಿ ತಾಲೂಕಿನ ಹಿಂಗಣಿ, ಬರಗುಡಿ, ಹಳೇ ಪಡನೂರ, ಶಿರಗೂರ-ಗುಬ್ಬೇವಾಡ, ಅಗರಖೇಡ, ಚಿಕ್ಕಮಣ್ಣೂರ, ಬುಯ್ಯಾರ, ಖೇಡಗಿ, ನಾಗರಳ್ಳಿ, ರೋಡಗಿ, ನಿವರಗಿ ಗ್ರಾಮಗಳು ಹಾಗೂ ಸಿಂಧಗಿ ತಾಲೂಕಿನ ಕಡಣಿ, ತಾವರಖೇಡ, ತಾರಾಪುರ, ಕುಡ್ನಳ್ಳಿ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೇವಾಡ, ಶಂಭೇವಾಡ, ಕುಮಸಗಿ, ಬಗಲೂರ, ಚಿಕ್ಕಹವಳಗಿ ಮತ್ತು ಶಿರಸಗಿ ಗ್ರಾಮಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ.

ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ ಹಾಗೂ ಕುಂಚಗನೂರ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ನದಿಯ ನೀರು ಗ್ರಾಮವನ್ನು ಸುತ್ತುವರೆದಿದೆ. ಇದರಿಂದಾಗಿ ತೀವ್ರ ಬೆಳೆ ಹಾನಿಯಾಗಿದೆ. ಕಮಲದಿನ್ನಿಯಲ್ಲಿ ಯಂತ್ರ ಚಾಲಿತ ಬೋಟ್ ವ್ಯವಸ್ಥೆ ಮಾಡಲಾಗಿದೆ.ಸಿಂಧಗಿ ತಾಲೂಕಿನ ತಾರಾಪುರ ಗ್ರಾಮಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕೃಷಿ ಬೆಳೆ ಹಾನಿಗೆೊಳಗಾಗಿದೆ. ಈ ಗ್ರಾಮಕ್ಕೂ ಸಹ ಯಂತ್ರ ಚಾಲಿತ ಬೋಟ್ ವ್ಯವಸ್ಥೆ ಮಾಡಲಾಗಿದೆ. ನದಿಪಾತ್ರದ ಎಲ್ಲ ಗ್ರಾಮಗಳಿಗೆ ಅಧಿಕಾರಿಗಳ ತಂಡ ನಿಯೋಜಿಸಿ, ಪ್ರವಾಹ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗಿದೆ.

ಸದ್ಯ ಯಾವುದೇ ಗಂಜಿ ಕೇಂದ್ರಗಳನ್ನು ತೆರೆದಿರುವುದಿಲ್ಲ. ಆದರೆ, ಅಗತ್ಯ ಬಿದ್ದರೆ ಕೇಂದ್ರಗಳನ್ನು ತೆರೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ನದಿಯ ನೀರು ಕಡಿಮೆಯಾದ ನಂತರ ಕೃಷಿ ಬೆಳೆ ಹಾನಿ ಸರ್ವೇ ಮಾಡಲು ಸಹ ವ್ಯವಸ್ಥೆ ಮಾಡಲಾಗಿದೆ ಹಾಗೂ ನದಿಪಾತ್ರದ ಗ್ರಾಮಗಳಿಗೆ ಈಗಾಗಲೇ ವೈದ್ಯಕೀಯ ತಂಡಗಳನ್ನೂ ಸಹ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ತಿಳಿಸಿದ್ದಾರೆ.

ABOUT THE AUTHOR

...view details