ವಿಜಯಪುರ : ಜಿಲ್ಲೆಯಲ್ಲಿ ಪ್ರವಾಹದ ನೀರು ನುಗ್ಗಿರುವ ಮನೆಗಳ ಕುಟುಂಬಗಳಿಗೆ ತಲಾ 10,000 ರೂ.ಗಳಂತೆ ಒಟ್ಟು 4041 ಕುಟುಂಬಗಳಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ತಿಳಿಸಿದ್ದಾರೆ.
ವಿಜಯಪುರ: ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ - flood relief fund distribution in vijaypur news
ವಿಜಯಪುರದಲ್ಲಿ ಉಂಟಾದ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ ತಲಾ 10,000 ರೂ.ಗಳಂತೆ ಒಟ್ಟು 4041 ಕುಟುಂಬಗಳಿಗೆ ಪರಿಹಾರ ಧನ ವಿತರಿಸಲಾಗಿದೆ.
ಒಟ್ಟು 3,031 ಮನೆಗಳಿಗೆ ಹಾನಿಯಾಗಿದೆ. ಆರ್ಜಿಆರ್ಹೆಚ್ಸಿಎಲ್ ತಂತ್ರಾಂಶದಲ್ಲಿ 2,848 ಮನೆಗಳನ್ನು ಎಂಟ್ರಿ ಮಾಡಲಾಗಿದೆ. ಇನ್ನೂ ಆರ್ಜಿಆರ್ಹೆಚ್ಸಿಎಲ್ ತಂತ್ರಾಂಶದಲ್ಲಿ 183 ಮನೆಗಳನ್ನು ಎಂಟ್ರಿ ಮಾಡುವುದು ಬಾಕಿ ಇದೆ. ಈ ತಂತ್ರಾಂಶದಲ್ಲಿ 2,828 ಮನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಳೆ ಹಾನಿಯ ಪರಿಹಾರ ತಂತ್ರಾಂಶದಲ್ಲಿ ಕೃಷಿ/ತೋಟಗಾರಿಕಾ ಬೆಳೆ ಹಾನಿಯ ಕ್ಷೇತ್ರ – 2,33,155.39 (ಹೆಕ್ಟೇರ್ಗಳಲ್ಲಿ) ಎಂಟ್ರಿ ಮಾಡಲಾಗಿದೆ. 2,56,971 ರೈತರ ಹೆಸರನ್ನು ಪರಿಹಾರ ತಂತ್ರಾಂಶದಲ್ಲಿ ಎಂಟ್ರಿ ಮಾಡಬೇಕಾಗಿದೆ. ಸದ್ಯ 2,31,121ರೈತರ ಹೆಸರನ್ನು ಎಂಟ್ರಿ ಮಾಡಲಾಗಿದೆ. ಒಟ್ಟು 4 ಹಂತಗಳಲ್ಲಿ ಒಟ್ಟು 27,749 ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2215.52 ಲಕ್ಷ ರೂ. ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
TAGGED:
ಜಿಲ್ಲಾಡಳಿತ ಪರಿಹಾರ ವಿತರಣೆ