ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮಳೆಯ ಮಹಾಪೂರ: ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಎಬಿವಿಪಿ - ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ವಿಜಯಪುರ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಒಂದೆಡೆ ಸಿಂದಗಿ ತಾಲೂಕಿನ ಆಲಮೇಲ-ತಾರಾಪುರ ಸೇತುವೆ ಜಲಾವೃತವಾಗಿದ್ದರೆ, ಇನ್ನೊಂದೆಡೆ ಭೀಮಾನದಿಯಲ್ಲಿ ಪ್ರವಾಹ ಹೆಚ್ಚಾಗಿದೆ.

ಆಲಮೇಲ-ತಾರಾಪುರ ಸೇತುವೆ ಜಲಾವೃತ

By

Published : Aug 8, 2019, 9:43 PM IST

ವಿಜಯಪುರ: ಮಳೆಯ ರೌದ್ರ ನರ್ತನಕ್ಕೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ನೆರೆ ಸಂತ್ರಸ್ತರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಿಡಲಾಗಿರುವ ನೀರಿನಿಂದ ಸಿಂದಗಿ ತಾಲೂಕಿನ ಆಲಮೇಲ-ತಾರಾಪುರ ಸೇತುವೆ ಜಲಾವೃತವಾಗಿದೆ. ಗ್ರಾಮದ ಸಂಪರ್ಕ ಸೇತುವೆ ಮೇಲೆ 4 ಅಡಿ ಅಷ್ಟು ನೀರು ನಿಂತಿದ್ದು, ತಾರಾಪುರಕ್ಕೆ ತೆರಳುವ ರಸ್ತೆ ಹೊರಜಗತ್ತಿನಿಂದ ಸಂಪರ್ಕ ಕಳೆದುಕೊಂಡಿದೆ. ತಾರಾಪುರಕ್ಕೆ ತೆರಳುವ ರಸ್ತೆ ತಗ್ಗು ಪ್ರದೇಶದಲ್ಲಿ ಇರುವುದರಿಂದ ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆಯಲ್ಲಿ ಇನ್ನೂ ನೀರು ಆವರಿಸುತ್ತಿದೆ. ಗ್ರಾಮದ ಒಳಗೆ ಹೋಗಲು ಸಾಧ್ಯವಾಗದೇ ಗ್ರಾಮದ ಹೊರಗಡೆಯೇ ಗ್ರಾಮಸ್ಥರು ವಾಹನಗಳನ್ನು ನಿಲ್ಲಿಸಿದ್ದರು.

ಆಲಮೇಲ-ತಾರಾಪುರ ಸೇತುವೆ ಜಲಾವೃತ

ಇನ್ನು ಭೀಮಾನದಿಯಲ್ಲಿ ಪ್ರವಾಹ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​, ಎಸ್ಪಿ ಪ್ರಕಾಶ ನಿಕ್ಕಂ, ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಭೀಮಾನದಿಯಲ್ಲಿ ಇನ್ನೂ ನೀರಿನ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಮಕ್ಕಳು, ದನ-ಕರುಗಳು ನದಿಯ ಕಡೆ ಹೋಗದಂತೆ ನೋಡಿಕೊಳ್ಳಲು ಎಸ್​​​ಪಿ ಹಾಗೂ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ನೆರೆ ಸಂತ್ರಸ್ಥರ ನೆರವಿಗೆ ಮುಂದಾದ ಎಬಿವಿಪಿ:

ನೆರೆ ಪೀಡಿತ ಪ್ರದೇಶದ ಜನರ ನೆರವಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂದಾಗಿದ್ದು, ಹಣ ಹಾಗೂ ದಿನಸಿ, ಬಟ್ಟೆ, ಹೊದಿಕೆ, ಅಕ್ಕಿ, ಬೇಳೆ, ಬಿಸ್ಕತ್ತ್, ಚಪ್ಪಲಿ, ಮೆಡಿಸಿನ್ ಸೇರಿದಂತೆ ಇತರ ವಸ್ತುಗಳನ್ನು ಸಂಗ್ರಹಿಸುತ್ತಿದೆ.

ABOUT THE AUTHOR

...view details