ವಿಜಯಪುರ: ಕರ್ತವ್ಯ ಲೋಪದಡಿ ಹಾಗೂ ಬೇಜವಾಬ್ದಾರಿ ವರ್ತನೆ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಆದೇಶಿಸಿದ್ದಾರೆ.
ಬೇಜವಾಬ್ದಾರಿ ವರ್ತನೆ: ಐವರು ಪೊಲೀಸರು ಅಮಾನತು - ಪೊಲೀಸ್ ಅಮಾನತು
ಕರ್ತವ್ಯ ಲೋಪದಡಿ ಹಾಗೂ ಬೇಜವಾಬ್ದಾರಿ ವರ್ತನೆ ಕಾರಣಕ್ಕೆ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಎಸ್ಪಿ ಅವರು ಐವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
![ಬೇಜವಾಬ್ದಾರಿ ವರ್ತನೆ: ಐವರು ಪೊಲೀಸರು ಅಮಾನತು Five policemen suspended over Irresponsible behavior](https://etvbharatimages.akamaized.net/etvbharat/prod-images/768-512-12745180-thumbnail-3x2-nin.jpg)
ಬೇಜವಾಬ್ದಾರಿ ವರ್ತನೆ : ಐವರು ಪೊಲೀಸರು ಅಮಾನತು
ಜಿಲ್ಲೆಯ ನಿಡಗುಂದಿ ಪೊಲೀಸ್ ಠಾಣೆಯ ಸಿಬ್ಬಂದಿ ಎಸ್.ಸಿ. ರೆಡ್ಡಿ, ಐ.ಜಿ.ಹೊಸಗೌಡರ ಹಾಗೂ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಐ.ಎಂ.ಮಕಾಂದಾರ, ಆರ್.ಎಲ್.ರಾಠೋಡ್ ಹಾಗೂ ಎಂ.ಎಲ್.ಯಾಳಗಿ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಹೊಸದಾಗಿ ಜಿಲ್ಲಾ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಪೊಲೀಸ್ ಇಲಾಖೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಈ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.