ವಿಜಯಪುರ:ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಿದ್ದು, ಇಂದು ಐವರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.
ವಿಜಯಪುರದಲ್ಲಿ ಕೊರೊನಾ ಅಟ್ಟಹಾಸ: ಮುಂಬೈನಿಂದ ಬಂದ ಕಾರ್ಮಿಕರಲ್ಲಿ ಐವರಿಗೆ ಸೋಂಕು! - ವಿಜಯಪುರ ಕೊರೊನಾ ಲೇಟೆಸ್ಟ್ ನ್ಯೂಸ್
ಇಂದು ವಿಜಯಪುರದಲ್ಲಿ ಮತ್ತೆ ಐವರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 59ಕ್ಕೆ ಏರಿಕೆಯಾಗಿದೆ.
ಮತ್ತೆ ಐವರಿಗೆ ಸೋಂಕು
ಮಹಾರಾಷ್ಟ್ರದ ಮುಂಬೈಗೆ ಗುಳೆ ಹೋಗಿದ್ದ ಕಾರ್ಮಿಕರು ಜಿಲ್ಲೆಗೆ ಬಂದಿದ್ದರು. ಇವರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
- ಸೋಂಕಿತರ ಮಾಹಿತಿ:
- 19 ವರ್ಷದ ಯುವತಿ ರೋಗಿ ನಂಬರ್ - 1176
- 45 ವರ್ಷದ ಪುರುಷ ರೋಗಿ ನಂಬರ್ -1177
- 10 ವರ್ಷದ ಬಾಲಕ ರೋಗಿ ನಂಬರ್ -1183
- 20 ವರ್ಷದ ಯುವತಿ ರೋಗಿ ನಂಬರ್ -1184
- 22 ವರ್ಷದ ರೋಗಿ -12011