ವಿಜಯಪುರ: ಬಂಗಾರದ ಅಂಗಡಿಗೆ ನುಗ್ಗಿ ಗಾಳಿಯಲ್ಲಿ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ ಐವರು ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ತಡರಾತ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ಹಿನ್ನೆಲೆ: ಫೆ. 13 ರಂದು ರಾತ್ರಿ ಸಿಂದಗಿ ಪಟ್ಟಣದ ಶಾಂತವೀರಮಠದ ಬೀದಿ ಪಕ್ಕದಲ್ಲಿರುವ ಕಾಳು ಪತ್ತಾರ ಎಂಬುವರಿಗೆ ಸೇರಿದ ನ್ಯೂ ಚಾಮುಂಡೇಶ್ವರಿ ಆಭರಣದ ಅಂಗಡಿ ಬಳಿ ಬ್ಲ್ಯಾಕ್ ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಐವರು ದರೋಡೆಕೋರರು ಜ್ಯುವೆಲ್ಲರ್ಸ್ ಶಾಪ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದರು. ಈ ಸಂದರ್ಭದಲ್ಲಿ ಅಂಗಡಿಗೆ ಬಂದಿದ್ದ ಆಲಮೇಲ ಮೂಲದ ವ್ಯಕ್ತಿಯೊಬ್ಬರು ಇವರಿಗೆ ಪ್ರತಿರೋಧ ಒಡ್ಡಿದ್ದಾರೆ. ಈ ವೇಳೆ ಕೂಡಲೇ ಸ್ಥಳೀಯರು ಜಮಾಯಿಸಿದ್ದರಿಂದ ಓರ್ವ ಆರೋಪಿ ಕಂಟ್ರಿ ಪಿಸ್ತೂಲ್ ಹೊರ ತೆಗೆದು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನು.
ಇದನ್ನೂ ಓದಿ:ಚಪ್ಪಲಿ, ಬನಿಯನ್, ಕಾರ್ಟನ್ ಬಾಕ್ಸ್ನಲ್ಲಿಟ್ಟು ಗೋಲ್ಡ್ ಸ್ಮಗ್ಲಿಂಗ್.. ಮಂಗಳೂರು ಏರ್ಪೋರ್ಟ್ನಲ್ಲಿ ಚಿನ್ನ ವಶಕ್ಕೆ
ತಕ್ಷಣ ಜನ ದುಷ್ಕರ್ಮಿಗಳ ಬಳಿ ಬರುತ್ತಿದ್ದಂತೆ ಖದೀಮರು ಬೈಕ್‌ನಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಅವರಲ್ಲಿ ಇಬ್ಬರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಇನ್ನೂ ಮೂರು ತಪ್ಪಿಸಿಕೊಂಡಿದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಹಾನಿಯಾಗಿರಲಿಲ್ಲ. ಹಣ ಕೂಡ ಸುರಕ್ಷಿತವಾಗಿದೆ.