ವಿಜಯಪುರ:ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ) ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸರು ಬಂಧಿಸಿದ್ದಾರೆ.
ವಿವಿಧೆಡೆ ಟಿಸಿ ಕಳ್ಳತನ ಮಾಡುತ್ತಿದ್ದ ಐವರ ಬಂಧನ - Basavana Bagevadi police
ವಿದ್ಯುತ್ ಟ್ರಾನ್ಸ್ಫಾರ್ಮರ್ (ಟಿಸಿ) ಕಳ್ಳತನ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿದ ಬಸವನ ಬಾಗೇವಾಡಿ ಪೊಲೀಸರು, ಬಂಧಿತರಿಂದ 2.30 ಲಕ್ಷ ರೂ. ಮೌಲ್ಯದ 8 ಟಿಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಟಿಸಿ ಕಳ್ಳತನ ಮಾಡುತ್ತಿದ್ದ ಐವರ ಬಂಧನ
ಬಸವರಾಜ ಸಂಗಣ್ಣ ಮದ್ದರಕಿ (35), ಮಡಿವಾಳಪ್ಪ ಸಿದ್ದಪ್ಪ ಅಗ್ನಿ (30), ಅಂಬರೀಶ ಕಲ್ಲಪ್ಪ ಬಳುಂಡಗಿ (32), ಈರಪ್ಪ ಕೆಂಚಪ್ಪ ಪೂಜಾರಿ (24) ಹಾಗೂ ಬಸವರಾಜ ರಾಮಣ್ಣ ಯಾಳವಾರ (40) ಬಂಧಿತ ಆರೋಪಿಗಳು. ಬಂಧಿತರಿಂದ 2.30 ಲಕ್ಷ ರೂ. ಮೌಲ್ಯದ 8 ಟಿಸಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಟಿಸಿಗಳನ್ನು ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ, ತಾಳಿಕೋಟೆ ತಾಲೂಕಿನ ನಾನಾ ಕಡೆ ಆರೋಪಿಗಳು ಕಳವು ಮಾಡಿದ್ದರು. ಈ ಸಂಬಂಧ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.