ಕರ್ನಾಟಕ

karnataka

ETV Bharat / state

ಆಸ್ತಿಗಾಗಿ ಪತಿ ಕೊಲೆಗೆ ಸುಪಾರಿ ನೀಡಿದ್ದ ಆರೋಪ.. ಪತ್ನಿ ಸೇರಿ ಆರು ಜನರ ಬಂಧನ - ಪುನ್ನಪ್ಪ ಕನಸು ಪವಾರ

ಆಸ್ತಿಗಾಗಿ ಪತಿ ಕೊಲೆಗೆ ಸುಪಾರಿ ನೀಡಿದ್ದ ಆರೋಪದಡಿ ಪತ್ನಿ ಸೇರಿ ಆರು ಜನರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಪೊಲೀಸರು
ವಿಜಯಪುರ ಪೊಲೀಸರು

By

Published : Oct 21, 2021, 10:39 PM IST

ವಿಜಯಪುರ: ಆಸ್ತಿಗಾಗಿ ಪತಿ ಕೊಲೆಗೆ ಸುಪಾರಿ ನೀಡಿದ್ದ ಆರೋಪದಡಿ ಪತ್ನಿ ಸೇರಿ ಆರು ಜನರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 14 ರಂದು ಜಿಲ್ಲೆಯ ಜಾಲಗೇರಿ ತಾಂಡಾ ನಂ.1ರ ನಿವಾಸಿ ಪುನ್ನಪ್ಪ ಕನಸು ಪವಾರನ ಹತ್ಯೆಯಾಗಿತ್ತು.

ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆಗೆ ನಿಖರ ಕಾರಣ ಗೊತ್ತಿಲ್ಲದ ಕಾರಣ ಪೊಲೀಸರು ಸಹ ಪ್ರಕರಣ ಭೇದಿಸಲು ಹರಸಾಹಸ ಪಡುತ್ತಿದ್ದರು. ಈ ಕುರಿತಂತೆ ಎಸ್​ಪಿ ಆನಂದ ಕುಮಾರ ಮಾರ್ಗದರ್ಶನದಲ್ಲಿ ಎಎಸ್​ಪಿ ರಾಮ್ ಅರಸಿದ್ದಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆ ಆರಂಭಿಸಲಾಯಿತು.

ಕೊಲೆಯಾದ ಪುನ್ನಪ್ಪ ಪವಾರ ಪತ್ನಿ ಲಲಿತಾ, ಆಸ್ತಿಗಾಗಿ ಎಂಟು ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದಳಂತೆ. ಇದರಲ್ಲಿ ಮುಂಗಡವಾಗಿ 1 ಲಕ್ಷ ರೂಪಾಯಿಯನ್ನು ಆರೋಪಿಗಳಿಗೆ ನೀಡಿದ್ದಳು. ಅವಳ ಸುಪಾರಿಯಂತೆ ಪುನ್ನಪ್ಪ ಪವಾರನನ್ನು ಆರೋಪಿಗಳು ಕೊಲೆ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ಜಲಪಾತದ ಪ್ರಪಾತಕ್ಕೆ ಬಿದ್ದ ಯುವಕ

ಕೊಲೆಯಾದ ಒಂದು ವಾರದಲ್ಲಿಯೇ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಭೇದಿಸಿದ ಎಲ್ಲ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಎಸ್​​ಪಿ ಆನಂದ್ ಕುಮಾರ ಬಹುಮಾನ ಘೋಷಿಸಿದ್ದಾರೆ.

ABOUT THE AUTHOR

...view details