ವಿಜಯಪುರ:ಭೀಮಾತೀರದಲ್ಲಿ ಬೇಕರಿ ಮಾಲೀಕನ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಾಮಚಂದ್ರ ಅಪ್ಪು ಜಾಧವ್, ಷಣ್ಮುಖ ಅರ್ಜುನ ಕಾಂಬ್ಳೆ, ರಿಯಾಜ್ ಲಾಡ್ಲೆ ಮಶಾಕ್ ಮುಜಾವರ್, ಉತ್ತಮ್ ಸದಾಶಿವ ಹೋಕುಳೆ, ದಿಲೀಪ್ ಭೀಮಾಶಂಕರ ಗಾಡ್ಗೆ ಎಂದು ಗುರುತಿಸಲಾಗಿದೆ. ನಿನ್ನೆ ಬೇಕರಿ ಮಾಲೀಕ ಮಾಸಸಿಂಗ್ ಅವರನ್ನು ಆರೋಪಿಗಳು ಕಿಡ್ನಾಪ್ ಮಾಡಿ, 50 ಲಕ್ಷ ರೂ. ಗಳ ಬೇಡಿಕೆ ಇಟ್ಟಿದ್ದರು. ಕೊನೆಗೆ ಕುಟುಂಬಸ್ಥರು 20 ಲಕ್ಷ ನೀಡುವುದಾಗಿ ಹೇಳಿದ್ದರು.