ಮುದ್ದೇಬಿಹಾಳ: ಜಿಲ್ಲಾಡಳಿತ ಕೃಷ್ಣಾ ನದಿ ತೀರದಲ್ಲಿ ಬರುವ ಗ್ರಾಮಗಳ ವ್ಯಾಪ್ತಿಯಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದರೂ ಮೀನುಗಾರರು ಅದನ್ನು ಲೆಕ್ಕಿಸದೆ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಅಧಿಕಾರಿಗಳು ಹಾಗೂ ಸರ್ಕಾರದ ಆದೇಶಕ್ಕೆ ಇವರು ಕವಡೆಕಾಸಿನ ಕಿಮ್ಮತ್ತು ನೀಡುತ್ತಿಲ್ಲ.
ವರುಣನ ಅರ್ಭಟಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಇತ್ತ ನಾರಾಯಣಪೂರ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಅಪಾಯ ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೃಷ್ಣೆಯ ಮೀನುಗಾರಿಕೆ ಸ್ಥಗಿತಗೊಳಿಸಿ ನದಿಗೆ ಇಳಿಯದಂತೆ ಎಚ್ಚರಿಕೆ ಕೊಟ್ಟಿದೆ. ಆದರೆ ಅದಕ್ಕೆ ಜಗ್ಗದ ಮೀನುಗಾರರು ನಿತ್ಯವೂ ತಮ್ಮ ಜೀವ ಲೆಕ್ಕಿಸದೇ ಬಲೆ ಬೀಸಿ ಮೀನುಗಾರಿಕೆಯ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ.
ತಾಲೂಕಿನ ನಾಲತವಾಡ ಸಮೀಪದಲ್ಲಿ ಬರುವ ಕೃಷ್ಣಾ ತೀರದಲ್ಲಿ ಸುಮಾರು ವರ್ಷಗಳಿಂದಲೂ ಮೀನುಗಾರಿಕೆಯಲ್ಲಿ ತೊಡಗಿರುವ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಮೀನುಗಾರರ ನೂರಕ್ಕೂ ಹೆಚ್ಚು ಕುಟುಂಬಗಳು ನದಿ ತೀರದಲ್ಲೇ ವಾಸಿಸುತ್ತಿವೆ. ಇತ್ತೀಚಿನ ವರುಣನ ಅರ್ಭಟಕ್ಕೆ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರುತ್ತಲೇ ಇದ್ದು, ಸುಮಾರು 40 ಸಾವಿರ ಕ್ಯೂಸೆಕ್ ನೀರು ನಿತ್ಯ ಆಲಮಟ್ಟಿ ಜಲಾಶಯದಿಂದ ಹರಿಬಿಡಲಾಗುತ್ತಿದೆ.
ಅಪಾಯ ಕಟ್ಟಿಟ್ಟ ಬುತ್ತಿ: