ವಿಜಯಪುರ:ಮೀನು ಹಿಡಿಯಲು ಹೋದ ಮೀನುಗಾರ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಂಡರಗಲ್ ಗ್ರಾಮದಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಬೆಸ್ತ ನದಿಯಲ್ಲಿ ಮುಳುಗಿ ಸಾವು.. - ಮೀನು ಹಿಡಿಯಲು ಹೋದ ಮೀನುಗಾರ ಸಾವು
ವಿಜಯಪುರ ಗ್ರಾಮವೊಂದರಲ್ಲಿ ಮೀನು ಹಿಡಿಯಲು ಹೋದ ಬೆಸ್ತ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಬೆಸ್ತ ಸಾವು
ನಿಂಗಬಸಪ್ಪ ಅವ್ವಪ್ಪ ಚಲವಾದಿ (32) ಮೃತಟ್ಟಿರುವ ಮೀನುಗಾರ. ಗ್ರಾಮದ ಕೃಷ್ಣಾ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋಗಿ ಬಲೆಗೆ ಸಿಲುಕಿಕೊಂಡು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.