ಕರ್ನಾಟಕ

karnataka

ETV Bharat / state

ವಿಜಯಪುರದ ಮೊದಲ ಕೊರೊನಾ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್!​ - ವಿಜಯಪುರದಲ್ಲಿ ಕೊರೊನಾ ಎಫೆಕ್ಟ್

ವಿಜಯಪುರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದ ಮೊದಲ ಮಹಿಳೆ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

fweff
ವಿಜಯಪುರದ ಮೊದಲ ಕೊರೊನಾ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್!​

By

Published : Apr 26, 2020, 3:23 PM IST

ವಿಜಯಪುರ: ಜಿಲ್ಲೆಯಲ್ಲಿ ಮೊದಲ ಕೊರೊನಾ ಪಾಸಿಟಿವ್​ ರೋಗಿಯಾಗಿದ್ದ 60 ವರ್ಷದ ಮಹಿಳೆ P-ನಂ. 221 ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿಜಯಪುರದ ಮೊದಲ ಕೊರೊನಾ ಸೋಂಕಿತ ಮಹಿಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್!​

ಮಹಿಳೆ ಸಂಬಂಧಿಕರ ಅಂತ್ಯಕ್ರಿಯೆಗೆ ಮಹಾರಾಷ್ಟ್ರದ ಇಚಲಕರಂಜಗಿಗೆ ಹೋಗಿ ಬಂದ ಮೇಲೆ ಕೊರೊನಾ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಮಹಿಳೆಯಿಂದ ಆಕೆಯ ಪತಿಗೂ ಸೋಂಕು ತಗುಲಿ ಆತ ಮೃತಪಟ್ಟಿದ್ದ. 25 ಜನರಿರುವ ತುಂಬು ಕುಟುಂಬವಾದ ಕಾರಣ ಜಿಲ್ಲೆಯಲ್ಲಿ ಸೋಂಕು ತಗುಲಿರುವ ಅರ್ಧದಷ್ಟು ಜನ ಈಕೆಯ ಸಂಪರ್ಕ ಹೊಂದಿದವರಾಗಿದ್ದಾರೆ.

ಕೋವಿಡ್​ ಆಸ್ಪತ್ರೆಯಾಗಿ ಬದಲಾಗಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿ ನುರಿತ ತಜ್ಞರು ಚಿಕಿತ್ಸೆ ನೀಡಿದ ಪರಿಣಾಮ ಕೊರೊನಾ ಪಾಸಿಟಿವ್ ಇದ್ದ ವರದಿ ಈಗ ನೆಗೆಟಿವ್ ಆಗಿದೆ. ವೈದ್ಯರು, ನರ್ಸ್​ಗಳು, ಆಸ್ಪತ್ರೆ ಸಿಬ್ಬಂದಿ ಹೂವಿನ ಮಳೆಗರೆದು ಗುಣಮುಖಳಾದ 221 ಸಂಖ್ಯೆಯ ರೋಗಿಯನ್ನು ಬೀಳ್ಕೊಡುವ ಮೂಲಕ ತಮ್ಮ ಸೇವೆಯ ಸಾರ್ಥಕತೆಯ ಸವಿ ಸವಿದರು.

ABOUT THE AUTHOR

...view details