ಕರ್ನಾಟಕ

karnataka

ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ; ಅಪಾರ ಪ್ರಮಾಣದ ಹಾನಿ

By

Published : Jan 15, 2021, 4:14 PM IST

ಕಬ್ಬು ಕಟಾವು ಮಾಡುವ ವೇಳೆ ಕಬ್ಬಿನ ಮೇಲ್ಭಾಗದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳ ಘರ್ಷಣೆಯಿಂದ ಹಾರಿದ ಬೆಂಕಿಯ ಕಿಡಿಗಳು ಈ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ
ವಿದ್ಯುತ್ ಶಾರ್ಟ್​ ಸರ್ಕ್ಯೂಟ್​ನಿಂದ ಕಬ್ಬಿನ ಗದ್ದೆಗೆ ಬೆಂಕಿ

ಮುದ್ದೇಬಿಹಾಳ (ವಿಜಯಪುರ):ಕಬ್ಬಿನ ಜಮೀನೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ತಗುಲಿ ಕಬ್ಬು ಬೆಳೆ ಹಾಗೂ ಸಾಗಿಸಲು ಬಂದಿದ್ದ ಟ್ರ್ಯಾಕ್ಟರ್ ಕೂಡಾ ಸುಟ್ಟು ಭಸ್ಮಗೊಂಡ ಘಟನೆ ತಾಲೂಕಿನ ಬಾಚಿಹಾಳ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ನಾಲತವಾಡ ಹೋಬಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಬ್ಬು ಕಟಾವು ಮಾಡುವ ವೇಳೆ ಕಬ್ಬಿನ ಮೇಲ್ಭಾಗದಲ್ಲಿ ಹಾಯ್ದು ಹೋಗಿರುವ ವಿದ್ಯುತ್ ತಂತಿಗಳ ಘರ್ಷಣೆಯಿಂದ ಹಾರಿದ ಬೆಂಕಿಯ ಕಿಡಿಗಳು ಈ ಅನಾಹುತಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ರೈತ ಹನಮಂತ ನಾಗಪ್ಪ ತೊಗರಿ ಅವರಿಗೆ ಸೇರಿದ ಹೊಲಕ್ಕೆ ಬೆಂಕಿ ತಗುಲಿದ್ದು, ಅಪಾರ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಹಿ ನಂದಿಸಿದ್ದಾರೆ.

ಕಣ್ಣೀರು ಹಾಕಿದ ಟ್ರ್ಯಾಕ್ಟರ್ ಮಾಲೀಕ : ಕಡಿದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಟ್ರ್ಯಾಕ್ಟರ್ ತಂದಿದ್ದ ಮಾಲೀಕ ಶೇಖಪ್ಪ ಮಾನಪ್ಪ ಪತ್ತಾರ ಕಣ್ಣೆದುರಿಗೆ ಟ್ರ್ಯಾಕ್ಟರ್ ಭಸ್ಮವಾಗುತ್ತಿರುವುದನ್ನು ಕಂಡು ಕಣ್ಣೀರು ಸುರಿಸಿ ಗೋಳಾಡಿದ ದೃಶ್ಯ ಮನಕಲಕುವಂತಿತ್ತು.

For All Latest Updates

TAGGED:

ABOUT THE AUTHOR

...view details