ಕರ್ನಾಟಕ

karnataka

ಬಸ್‌ಗೆ ಬೆಂಕಿ: ಕಡೆ ಶ್ರಾವಣ ಶುಕ್ರವಾರ ಆಚರಿಸಲು ಹೊರಟ ಐವರು ಸಜೀವ ದಹನ

ಲಾಕ್​ಡೌನ್ ಸಡಿಲಿಕೆಯಾದ ಕಾರಣ ಕಡೆ ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಯನ್ನು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲು ಹೊರಟಿದ್ದ ಕುಟುಂಬವೊಂದು ಬಸ್​ ದುರಂತದಲ್ಲಿ ಬಾರದ ಲೋಕಕ್ಕೆ ಪಯಣಿಸಿದೆ.

By

Published : Aug 12, 2020, 7:56 PM IST

Published : Aug 12, 2020, 7:56 PM IST

Updated : Aug 12, 2020, 9:36 PM IST

Fire to a private bus in Chitradurga..Five deaths
ಖಾಸಗಿ ಬಸ್ ಬೆಂಕಿ: ಕಡೆ ಶ್ರಾವಣ ಶುಕ್ರವಾರ ಆಚರಿಸಲು ಹೊರಟ್ಟಿದ್ದ ಐವರು ಸಜೀವ ದಹನ

ವಿಜಯಪುರ:ಕಡೆ ಶ್ರಾವಣ ಶುಕ್ರವಾರವನ್ನು ಸಂಭ್ರಮದಿಂದ ಆಚರಿಸಲೆಂದು ಖಾಸಗಿ ಬಸ್ ಏರಿ ಹೊರಟಿದ್ದ ಕುಟುಂಬವೊಂದು ದಾರುಣ ದುರಂತಕ್ಕೀಡಾಗಿದೆ. ವಿಜಯಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಚಿತ್ರದುರ್ಗದ ಸಮೀಪ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ, ಐವರು ಸಜೀವ ದಹನವಾಗಿದ್ದಾರೆ.

ಹಿರಿಯೂರು ತಾಲೂಕಿನ ಕೆ.ಆರ್​.ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಕ್ಕೆಶ್ರೀ ಖಾಸಗಿ ಬಸ್​ ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಶೀಲಾ ರವಿ ಪಡಕೋಟೆ (33), ಆಕೆಯ ಮಕ್ಕಳಾದ ಸ್ಪರ್ಶ (8), ಸಮೃದ್ಧ (5) ಹಾಗೂ ಶೀಲಾ ಸಹೋದರಿ ಕವಿತಾ ವಿನಾಯಕ (29), ಆಕೆಯ ಮಗಳು ನಿಶ್ಚಿತಾ (3) ಸಾವಿಗೀಡಾಗಿದ್ದಾರೆ.

ಖಾಸಗಿ ಬಸ್ ಬೆಂಕಿ: ಕಡೆ ಶ್ರಾವಣ ಶುಕ್ರವಾರ ಆಚರಿಸಲು ಹೊರಟ್ಟಿದ್ದ ಐವರು ಸಜೀವ ದಹನ

ಇವರೆಲ್ಲರೂ ಮಂಗಳವಾರ ರಾತ್ರಿ 9-20ರ ಸಮಯಕ್ಕೆ ವಿಜಯಪುರ ಜಿಲ್ಲೆಯ ಗಣೇಶ ನಗರದಲ್ಲಿ ಬಸ್ ಹತ್ತಿದ್ದು, ಪ್ರಯಾಣದ ದೃಶ್ಯ ಪಕ್ಕದ ಕಿರಾಣಿ ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಪತಿಯಂದಿರನ್ನು ಸೇರಲು ಅಕ್ಕ-ತಂಗಿ ತಮ್ಮ ಪುಟ್ಟ ಮಕ್ಕಳ ಜೊತೆ ಹೋಗುತ್ತಿದ್ದರು. ಇದರಿಂದ ಶೀಲಾಳ ಪತಿ ರವಿಯವರ ಹುಟ್ಟೂರಾದ ಹಿಟ್ಟನಹಳ್ಳಿಯ ಅಂಬೇಡ್ಕರ್ ಕಾಲೋನಿಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೊರೊನಾ ಲಾಕ್​ಡೌನ್ ಜಾರಿಯಾಗುವ ಮುನ್ನವೇ ಶೀಲಾ ಹಾಗೂ ಸಹೋದರಿ ಕವಿತಾ ತಮ್ಮ ಮಕ್ಕಳೊಂದಿಗೆ ವಿಜಯಪುರ ಸೇರಿದ್ದರು. ಶ್ರಾವಣ ಮಾಸ ಮುಗಿಯುತ್ತಾ ಬಂದಿದ್ದು, ಲಾಕ್​ಡೌನ್ ಸಹ ಸಡಿಲಿಕೆಯಾದ ಕಾರಣ, ಕಡೆ ಶ್ರಾವಣ ಶುಕ್ರವಾರದ ಲಕ್ಷ್ಮೀ ಪೂಜೆಯನ್ನು ಬೆಂಗಳೂರಿನಲ್ಲಿ ಸಂಭ್ರಮದಿಂದ ಆಚರಿಸಲು ಹೊರಟಿದ್ದರು ಎಂಬ ಮಾಹಿತಿ ದೊರೆತಿದೆ.

Last Updated : Aug 12, 2020, 9:36 PM IST

ABOUT THE AUTHOR

...view details