ಕರ್ನಾಟಕ

karnataka

ETV Bharat / state

ಸಿಂದಗಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗ್ಯಾಸ್​ ಗೋದಾಮಿಗೆ ಬೆಂಕಿ..

ಸಿಲಿಂಡರ್ ಬ್ಲಾಸ್ಟ್ ಆಗಿ ಗೋದಾಮು ಹೊತ್ತಿ ಉರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ‌ ನಡೆದಿದೆ

disaster occurred when the cylinder warehouse caught fire
ಸಿಲಿಂಡರ್ ಗೋದಾಮಿಗೆ ಬೆಂಕಿ ತಪ್ಪಿದ ಬಾರಿ ಅನಾಹುತ

By

Published : Dec 4, 2022, 5:15 PM IST

ವಿಜಯಪುರ :ಗ್ಯಾಸ್​ ಸಿಲಿಂಡರ್ ಬ್ಲಾಸ್ಟ್ ಆಗಿ ಗೋದಾಮು ಹೊತ್ತಿ ಉರಿದ ಘಟನೆ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ‌ ನಡೆದಿದೆ. ಏಕಾಏಕಿ ಸ್ಫೋಟವಾದ ಸಿಲಿಂಡರ್​ ಬೆಂಕಿ ದಟ್ಟವಾದ ಹೊಗೆಯಿಂದ ಇಡೀ ಗೋದಾಮುವನ್ನು ಆವರಿಸಿತ್ತು. ಇದರಿಂದ ಪಟ್ಟಣದ ಸುತ್ತಮುತ್ತ ಕೆಲ ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ದಟ್ಟ ಹೊಗೆ ಆಗಸದತ್ತ ಚಿಮ್ಮುತ್ತಿದ್ದಂತೆ ಗಾಬರಿಗೊಂಡ ಜನ ಅಲ್ಲಿ ಓಡಿ ಹೋದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ :ಅಕ್ರಮ ಸಿಲಿಂಡರ್​ ರೀಫಿಲ್ಲಿಂಗ್​ ವೇಳೆ ಗ್ಯಾಸ್​ ಸ್ಫೋಟ.. ಮೂವರಿಗೆ ಗಾಯ, ಹೊತ್ತಿ ಉರಿದ ಗೋದಾಮು..

ABOUT THE AUTHOR

...view details