ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್ ಹತ್ತಿರದ ಬಂಗಾರದ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕರಕಲಾದ ಘಟನೆ ನಡೆದಿದೆ.
ಮೌನೇಶ ಬಡಿಗೇರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿಯಲ್ಲಿ ಗ್ಯಾಸ್ ಚಿಮಣಿಯಿಂದ ಬೆಂಕಿ ಹೊತ್ತಿಕೊಂಡಿತ್ತು. ಈ ವೇಳೆ, ಮಾಜಿ ಸೈನಿಕ ಸದಾಶಿವ ಗಣಿ ಎಂಬುವವರು ಸಾಹಸ ಮೆರೆದು, ಅಂಗಡಿಯಲ್ಲಿನ ಲಕ್ಷಾಂತರ ರೂ. ನಗದು ಹಾಗೂ ಕೆಲ ಚಿನ್ನಾಭರಣ ಹೊರತಂದಿದ್ದಾರೆ.