ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ : ವಿಜಯಪುರದಲ್ಲಿ ಹೊತ್ತಿ ಉರಿದ ಹತ್ತಿ ತುಂಬಿದ್ದ ಲಾರಿ - ವಿಜಯಪುರದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಹತ್ತಿ ತುಂಬಿದ್ದ ಲಾರಿ

ಸೊಲ್ಲಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ದದಲ್ಲೇ ಲಾರಿ ಸಮೇತ ಹತ್ತಿ ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 52 ರ ಝಳಕಿ ಕ್ರಾಸ್ ಬಳಿ ಸಂಭವಿಸಿದೆ.

ಹೊತ್ತಿ ಉರಿದ ಹತ್ತಿ ತುಂಬಿದ್ದ ಲಾರಿ
ಹೊತ್ತಿ ಉರಿದ ಹತ್ತಿ ತುಂಬಿದ್ದ ಲಾರಿ

By

Published : Mar 10, 2022, 7:40 PM IST

ವಿಜಯಪುರ: ಹತ್ತಿ ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 52 ರ ಝಳಕಿ ಕ್ರಾಸ್ ಬಳಿ ನಡೆದಿದೆ.

ಹೊತ್ತಿ ಉರಿದ ಹತ್ತಿ ತುಂಬಿದ್ದ ಲಾರಿ

ಸೊಲ್ಲಾಪುರದಿಂದ ಬೆಂಗಳೂರಿಗೆ ಹೊರಟಿದ್ದ TN-52, H-4453 ನಂಬರ್​​ನ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ದದಲ್ಲೇ ಲಾರಿ ಸಮೇತ ಹತ್ತಿ ಬೆಂಕಿಗಾಹುತಿಯಾಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕ ಲಾರಿ ಬಿಟ್ಟು ಇಳಿದು ಬಚಾವಾಗಿದ್ದಾನೆ. ಈ ಘಟನೆಯಿಂದ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್​ ಜಾಮ್​​​ ಉಂಟಾಗಿ ವಾಹನ ಸವಾರರು ಪರದಾಡಿದರು.

ಬೆಂಕಿ ಹೊತ್ತಿಕೊಂಡು‌ ಒಂದು ಗಂಟೆಯಾದರೂ ಅಗ್ನಿ ಶಾಮಕ ದಳ ವಾಹನ ಬಾರದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಝಳಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ‌ ಈ‌ ಘಟನೆ ಸಂಭವಿಸಿದೆ.

For All Latest Updates

ABOUT THE AUTHOR

...view details