ವಿಜಯಪುರ: ಸರ್ಕಾರ ಆದೇಶದ್ವಯ ಮಾಸ್ಕ್ ಹಾಕದೆ ಓಡಾಟ ನಡೆಸುವ ಜನರಿಗೆ ಸಾವಿರ ರೂ. ದಂಡ ಹಾಕುತ್ತಿರುವದು ಆಕ್ರೋಶಕ್ಕೆ ಕಾರಣವಾಗಿದೆ.
ಕೊರೊನಾ ವೈರಸ್ ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೂ ಕೋವಿಡ್ಗೆ ಕ್ಯಾರೆ ಎನ್ನದ ಜನ ಮಾಸ್ಕ್ ಹಾಕದೆ ಓಡಾಡುತ್ತಿರುವ ಕಾರಣ ರಾಜ್ಯ ಸರ್ಕಾರ ಮಾಸ್ಕ್ ಧರಿಸದವರಿಗೆ 1000 ರೂ. ದಂಡ ಹಾಕುವಂತೆ ಆದೇಶ ಜಾರಿ ಮಾಡಿತು. ಇದಕ್ಕೆ ನಗರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ವಿಜಯಪುರದಲ್ಲಿ ಸಾರ್ವಜನಿಕರ ವಿರೋಧ ಇಂದು ಬೆಳಗ್ಗೆ ಎಲ್‌ಬಿಎಸ್ ರಸ್ತೆಯಲ್ಲಿ ಪಾಲಿಕೆ ಅಧಿಕಾರಿಗಳು ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ದಂಡ ವಿಧಿಸಿದರು. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ 1000 ರೂ. ದಂಡ ಜನರಿಗೆ ಹೊರೆಯಾಗುತ್ತದೆಂದು ಸಾರ್ವಜನಿಕರು ನಡುರಸ್ತೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ, ಪ್ರತಿಭಟನೆಗೆ ಮುಂದಾದರು.
ಇದೇ ವೇಳೆ ಗಾಂಧಿ ಚೌಕ್ ಸಂಚಾರಿ ಠಾಣೆ ಪಿಎಸ್‌ಐ ಆರೀಫ್ ಸ್ಥಳಕ್ಕಾಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.