ಕರ್ನಾಟಕ

karnataka

ETV Bharat / state

ಮನಿಯಾರ್ ಸಮಾಜ ಸೇವಾ ಟ್ರಸ್ಟ್​ನಿಂದ ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು - ಮನಿಯಾರ್ ಸಮಾಜ ಸೇವಾ ಟ್ರಸ್ಟ್​ನಿಂದ ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು

ಪಟ್ಟಣದ ಹುಡ್ಕೋದಲ್ಲಿರುವ ಮನಿಯಾರ್ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಪಟ್ಟಣದ 200ಕ್ಕೂ ಹೆಚ್ಚು ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಯಿತು.

ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು
ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು

By

Published : May 11, 2021, 9:44 AM IST

ಮುದ್ದೇಬಿಹಾಳ: ಕೊರೊನಾ ಎರಡನೇ ಅಲೆಯ ಮಧ್ಯೆ ರಂಜಾನ್ ಹಬ್ಬದ ಆಚರಣೆಗೆ ಬಡ ಮುಸ್ಲಿಂ ಸಮಾಜದ ಮಹಿಳೆಯರಿಗೆ ಪ್ರತಿ ವರ್ಷ ಕಿಟ್ ವಿತರಿಸುತ್ತಿದ್ದ ಇಲ್ಲಿನ ಮನಿಯಾರ್ ಸಮಾಜ ಸೇವಾ ಟ್ರಸ್ಟ್, ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆ ಅರ್ಥಿಕ ಸಹಾಯ ಮಾಡುವ ಮೂಲಕ ತಮ್ಮ ಸೇವಾ ಕಾರ್ಯ ಮುಂದುವರೆಸಿದೆ.

ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು

ಪಟ್ಟಣದ ಹುಡ್ಕೋದಲ್ಲಿರುವ ಮನಿಯಾರ್ ಸಮಾಜ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯ್ಯೂಬ ಮನಿಯಾರ್ ಅವರು, ತಮ್ಮ ನಿವಾಸದ ಎದುರಿಗೆ ಸಾಮಾಜಿಕ ಅಂತರದೊಂದಿಗೆ 200ಕ್ಕೂ ಹೆಚ್ಚು ಬಡ ಮುಸ್ಲಿಂ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾ‌ ವೈರಸ್ ಅಲೆ ಎಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ನಮ್ಮ ಟ್ರಸ್ಟ್ ನಿಂದ ಕಳೆದ ಇಪ್ಪತ್ತು ವರ್ಷಗಳಿಂದ ಈ ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದು, ಈ ಸಲ ರಂಜಾನ್ ಹಬ್ಬದ ಆಚರಣೆಗೆ ಹಣದ ಸಹಾಯ ನೀಡಿದ್ದೇವೆ ಎಂದರು.

ವಕೀಲರಿಂದಲೂ ಸಹಾಯಹಸ್ತ: ಪಟ್ಟಣದ ನ್ಯಾಯವಾದಿ ವಿ.ಎಸ್.ಸಾಲಿಮಠ ಅವರು ಅಯ್ಯೂಬ್ ಮನಿಯಾರ್ ಅವರ ಸಾಮಾಜಿಕ ಕಾರ್ಯದಿಂದ ಪ್ರೇರಣೆಗೊಂಡು, ಮುಸ್ಲಿಂ ಬಾಂಧವರಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಕಷ್ಟದಲ್ಲಿರುವವರಿಗೆ ನೆರವು ಕೊಡುವ ಕಾರ್ಯ ಮನಸ್ಸಿಗೆ ನೆಮ್ಮದಿ ತರುತ್ತದೆ ಎಂದು ಹೇಳಿದರು.

ಇದನ್ನೂ ಓದಿ : ತಿರುಪತಿಯಲ್ಲಿ ಆಕ್ಸಿಜನ್​ ಕೊರತೆ: 11 ಕೋವಿಡ್ ಸೋಂಕಿತರು ಸಾವು!

ABOUT THE AUTHOR

...view details