ವಿಜಯಪುರ: ನಗರದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಗಣೇಶ ಉತ್ಸವ ಮಂಡಳಿಗಳ ಮಹಾ ಮಂಡಳವು ಫೈಬರ್ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ನೇತೃತ್ವದಲ್ಲಿ ಫೈಬರ್ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.
ಪಿಓಪಿಯಿಂದ ಮಾಡುವ ಗಣೇಶನ ಮೂರ್ತಿಯಂತೆಯೇ ಇರುವ ಈ ಫೈಬರ್ ಗಣೇಶನ ಮೂರ್ತಿಯನ್ನು ಮಹಾರಾಷ್ಟ್ರದಿಂದ ತರಲಾಗಿದೆ. ಕಳೆದ ಐದು ವರ್ಷಗಳಿಂದ ಈ ಫೈಬರ್ ಗಣೇಶನನ್ನು ಇಲ್ಲಿ ಪೂಜಿಸಲಾಗುತ್ತಿದೆ. ಈ ಫೈಬರ್ ಗಣೇಶನ ಮೂರ್ತಿಯ ಎದುರಿಗೆ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಒಂಬತ್ತು ದಿನಗಳ ಉತ್ಸವದ ಬಳಿಕ ಮಣ್ಣಿನ ಗಣಪತಿಯನ್ನು ನಿಮಜ್ಜನ ಮಾಡಲಾಗುತ್ತದೆ. ಜೊತೆಗೆ ಈ ಫೈಬರ್ ಗಣೇಶನನ್ನು ಸುರಕ್ಷಿತವಾಗಿ ಮುಂದಿನ ವರ್ಷದ ಉತ್ಸವಕ್ಕೆ ತೆಗೆದಿರಿಸಲಾಗುತ್ತದೆ.