ವಿಜಯಪುರ:ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಿಂದ ಬಂದಿದ್ದವರ ಆರೋಗ್ಯ ತಪಾಸಣೆಯಲ್ಲಿ ತೊಡಗಿದ್ದ ಜಿಲ್ಲಾಡಳಿತಕ್ಕೆ ಈಗ ಮತ್ತೊಂದು ತೆಲೆನೋವು ಆರಂಭವಾಗಿದ್ದು, ಗುಜರಾತ್ ರಾಜ್ಯದ ಸೂರತ್ನಿಂದ ಜಿಲ್ಲೆಗೆ ಬಂದಿರುವ 10 ಜನರಲ್ಲಿ ಇಬ್ಬರಿಗೆ ಜ್ವರ, ನೆಗಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಅನುಪಮ್ ಅಗರವಾಲ್, ಸೂರತ್ನಿಂದ ಬಂದಿದ್ದ ಇಬ್ಬರಲ್ಲಿ ಕೆಮ್ಮು, ನೆಗಡಿ ಕಂಡು ಬಂದಿರುವ ಕಾರಣ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಕಲಬುರಗಿಗೆ ಕಳುಹಿಸಲಾಗಿದೆ ಎಂದರು.
ಸೂರತ್ನಿಂದ ಹತ್ತು ಜನ ಮಹಾರಾಷ್ಟ್ರದ ಮೂಲಕ ಕರ್ನಾಟಕ ಗಡಿ ಮೂಲಕ ಬಂದು ಇಂಡಿ ತಾಲೂಕಿನ ನಾಗಠಾಣ ಬಳಿ ವಾಸವಿದ್ದರು. ಒಂದು ವಾರದ ಹಿಂದೆ ಬಂದವರು ನಮಗೆ ನಾಗಠಾಣನಲ್ಲಿ ಸಿಕ್ಕಿದ್ದಾರೆ. ಅವರನ್ನು ಹಿಡಿದು ಕ್ವಾರೈಂಟನ್ನಲ್ಲಿ ಇಟ್ಟಿದ್ದೇವೆ. ಅದರಲ್ಲಿ ಇಬ್ಬರಿಗೆ ರೋಗ ಲಕ್ಷಣಗಳು ಕಂಡುಬಂದಿವೆ. ಹಾಗಾಗಿ ಅವರ ಸ್ಯಾಂಪಲ್ ಕಳುಹಿಸಲಾಗಿದೆ. ಅವರ ವರದಿಗಾಗಿ ಕಾಯಲಾಗುತ್ತಿದೆ ಎಂದರು.
ಸೂರತ್ನಿಂದ ಮಹಾರಾಷ್ಟ್ರಕ್ಕೆ ಬಂದು ಅಲ್ಲಿಂದ ಕರ್ನಾಟಕ ಸೇರಿದ್ದಾರೆ. ಮಹಾರಾಷ್ಟ್ರದ ಗಡಿಯಿಂದ ನಾಗಠಾಣಕ್ಕೆ ನಡೆದುಕೊಂಡು ಬಂದಿದ್ರು.
ಇವರನ್ನು ಮಾರ್ಚ್ 30ರಂದು ಹಿಡಿದು ಇಡಲಾಗಿದೆ. ಈ ಹತ್ತು ಜನರು ಮೂಲತಃ ಸೂರತ್ನವರಾಗಿದ್ದಾರೆ ಎಂದರು.
ಇದುವರೆಗೂ ವಿಜಯಪುರದಲ್ಲಿ 416 ಜನರು ನಿಗಾದಲ್ಲಿ ಇದ್ದರು. ಈಗ 9 ಜನ ಮಾತ್ರ ಆಸ್ಪತ್ರೆ ಕ್ವಾರಂಟೈನ್ನ್ನಲ್ಲಿ ಇದ್ದಾರೆ. ಒಟ್ಟು 57 ಸ್ಯಾಂಪಲ್ ಕಳುಹಿಸಲಾಗಿತ್ತು. ಅದರಲ್ಲಿ 54 ವರದಿ ನೆಗೆಟಿವ್ ಬಂದಿದ್ದು, 3 ವರದಿಗಳು ಮಾತ್ರ ಬಾಕಿ ಇವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.