ಕರ್ನಾಟಕ

karnataka

ETV Bharat / state

ಮಗಳ ಉತ್ತಮ ಫಲಿತಾಂಶ ನೋಡಲು ಈಗ ತಂದೆಯೇ ಇಲ್ಲ!

ತನ್ನ ಮಗಳ ಎಸ್​ಎಸ್​ಎಲ್​ಸಿ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದ ತಂದೆ ಇಹಲೋಕ ತ್ಯಜಿಸಿದ್ದಾರೆ. ಆದರೆ ಈಗ ಪರೀಕ್ಷಾ ಫಲಿತಾಂಶ ಬಂದಿದ್ದು, ಮಗಳು ಉತ್ತಮ ಅಂಕ ಗಳಿಸಿದ್ದಾಳೆ.

sslcstudent
sslcstudent

By

Published : Aug 11, 2020, 10:16 AM IST

ವಿಜಯಪುರ: ತಂದೆಯೊಬ್ಬ ತನ್ನ ಮಗಳ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವಾಗಲೇ ಇಹಲೋಕ ತ್ಯಜಿಸಿದ್ದಾರೆ. ಆದರೆ, ಈಗ ಫಲಿತಾಂಶ ಬಂದಿದ್ದು, ಮಗಳು ಉತ್ತಮ ಅಂಕ ಗಳಿಸಿದ್ದಾಳೆ.

ಆದರೆ, ಈ ಸಂತೋಷ ಹಂಚಿಕೊಳ್ಳಲು ತಂದೆಯೇ ಇಲ್ಲ. ಎಸ್ಎಸ್ಎಲ್​ಸಿ ಪರೀಕ್ಷೆ ಕೇವಲ ವಿದ್ಯಾರ್ಥಿಗಳಲ್ಲಷ್ಟೇ ಅಲ್ಲ, ಅವರ ಪೋಷಕರಲ್ಲಿಯೂ ಸಾಕಷ್ಟು ಕುತೂಹಲ ಮತ್ತು ಸಂತೋಷಕ್ಕೆ ಕಾರಣವಾಗುತ್ತೆ. ನಿನ್ನೆ ಎಸ್ಎಸ್ಎಲ್​ಸಿ ಪರೀಕ್ಷೆಯ ಫಲಿತಾಂಶ ಬಂದಿದ್ದು, ಇಲ್ಲಿನ ಎಕ್ಸ್​​ಲೆಂಟ್ ಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಶೆಟಗಾರ ಶೇ. 82ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿದ್ದಾಳೆ. ಆದರೆ, ಆಕೆಯ ಮೊಗದಲ್ಲಿ ಮಾತ್ರ ಸಂತೋಷವೇ ಇರಲಿಲ್ಲ.

ಎಸ್​ಎಸ್​ಎಲ್​ಸಿ ಫಲಿತಾಂಶ

ವಿಜಯಪುರ ನಗರದ ಪ್ರತಿಷ್ಠಿತ ಜಿಒಸಿಸಿ (ಸರಕಾರಿ ನೌಕರರ ಸಹಕಾರಿ ಸಂಘ) ಬ್ಯಾಂಕ್​ನ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಚೀಫ್ ಅಕೌಂಟೆಂಟ್ ಸಿದ್ದರಾಮ ಶೆಟಗಾರ ಕಳೆದ ಆ. 6ರಂದು ನಿಧನರಾಗಿದ್ದಾರೆ. ಮಗಳ ಸಾಧನೆಯ ಖುಷಿ ಅನುಭವಿಸಿ ಕಾಲೇಜಿಗೆ ಸೇರಿಸಬೇಕಾಗಿದ್ದ ತಂದೆ ಈಗ ಇಲ್ಲ.

ತಂದೆಯ ಅಕಾಲಿಕ ಅಗಲಿಕೆ ಒಂದೆಡೆಯಾದರೆ, ಎಸ್ಎಸ್ಎಲ್​ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮತ್ತೊಂದೆಡೆ. ಈ ಕಹಿ- ಸಿಹಿ ನಡುವೆ ಬಾಲಕಿ ಓದು ಮುಂದುವರಿಸಬೇಕಿದೆ.

ABOUT THE AUTHOR

...view details