ಕರ್ನಾಟಕ

karnataka

ETV Bharat / state

ಇಂಡಿಯಲ್ಲಿ ನ್ಯಾಯವಾದಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ - ವಿಜಯಪುರ ‌ಜಿಲ್ಲೆ ಇಂಡಿ ಪಟ್ಟಣ

ಹಳೇ ವೈಷಮ್ಯದ ಹಿನ್ನೆಲೆ ನಾಲ್ವರು ದುಷ್ಕರ್ಮಿಗಳು ನ್ಯಾಯವಾದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆ ವಿಜಯಪುರ ‌ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ.

ನ್ಯಾಯವಾದಿ ಮೇಲೆ ಹಲ್ಲೆ

By

Published : Sep 12, 2019, 11:16 PM IST

ವಿಜಯಪುರ:ನಾಲ್ವರು ದುಷ್ಕರ್ಮಿಗಳಿಂದ ನ್ಯಾಯವಾದಿ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವಿಜಯಪುರ ‌ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ.

ನ್ಯಾಯವಾದಿ ಸಂಗಮೇಶ ಚಾಂದಕವಟೆ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ. ಸಂಗಮೇಶ ಕೈ ಬೆರಳುಗಳು ತುಂಡಾಗಿದ್ದು, ಸ್ಥಿತಿ ಗಂಭೀರವಾಗಿದೆ. ಪಟ್ಟಣದ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಆವರಣಕ್ಕೆ ಕರೆದೊಯ್ದು ಹಲ್ಲೆ ಮಾಡಲಾಗಿದೆ.

ನ್ಯಾಯವಾದಿ ಮೇಲೆ ಹಲ್ಲೆ

ಆರೋಪಿಗಳು ಪರಾರಿಯಾಗಿದ್ದು, ಘಟನೆಗೆ ಹಳೇ ವೈಷಮ್ಯ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಂಭೀರ ಗಾಯಗೊಂಡ‌ ನ್ಯಾಯವಾದಿ ಸಂಗಮೇಶ‌ ಅವರನ್ನು ಮಹಾರಾಷ್ಟ್ರದ ಸೊಲ್ಲಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಇಂಡಿ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details