ಕರ್ನಾಟಕ

karnataka

ETV Bharat / state

ಕೀಟನಾಶಕಗಳ ನಿಷೇಧದಿಂದ ರೈತರಿಗೆ ಸಂಕಷ್ಟ: ಕಂಗಾಲಾದ ಮಾರಾಟಗಾರರು

ಅಗ್ಗದ ಬೆಲೆಯಲ್ಲಿ ರೈತರಿಗೆ ದೊರೆಯುವ 27 ಕೀಟನಾಶಕ, ಶಿಲೀಂದ್ರ ಹಾಗೂ ಕಳೆನಾಶಕಗಳ ನಿಷೇಧಕ್ಕೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಹೀಗಾಗಿ ಪರ್ಯಾಯ ರಾಸಾಯನಿಕಗಳ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.

Farmers are in trouble by central idea to boycott pesticides
ಕಿಟನಾಶಕ ನಿಷೇಧಕ್ಕೆ ರೈತರ ಹಾಗೂ ಮಾರಾಟಗಾರ ಕಳವಳ

By

Published : Jul 4, 2020, 6:01 PM IST

ವಿಜಯಪುರ: ಕೇಂದ್ರ ಸರ್ಕಾರ ಮೇ 14ರಂದು ಅಗ್ಗದ ಬೆಲೆಯಲ್ಲಿ ರೈತರಿಗೆ ದೊರೆಯುವ 27 ಕೀಟನಾಶಕ, ಶಿಲೀಂದ್ರ ಹಾಗೂ ಕಳೆ ನಾಶಕಗಳ ನಿಷೇಧಕ್ಕೆ ಆದೇಶ ಮಾಡಿದೆ. ಇತ್ತ ಬೆಳೆಗಳಿಗೆ ಸಿಂಪಡಣೆ ಮಾಡುವ ರಾಸಾಯನಿಕ ಔಷಧ ನಿಷೇಧಕ್ಕೆ ರೈತರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾದರೆ, ಕೇಂದ್ರ ಸರ್ಕಾರದ ನಿರ್ಧಾರ ರಾಸಾಯನಿಕ ಮಾರಾಟಗಾರರು ಕಂಗಾಲಾಗುವಂತೆ ಮಾಡಿದೆ.

ಕೀಟನಾಶಕ ನಿಷೇಧಿಸಿರುವುದರಿಂದ ರೈತರು ಕಳವಳ: ಮಾರಾಟಗಾರರು ಕಂಗಾಲು

ಕೇಂದ್ರ ಸರ್ಕಾರ ರೈತರಿಗೆ ಕಡಿಮೆ ಬೆಲೆಯಲ್ಲಿ ಸಿಗುವ ಕೆಲವು ರಾಸಾಯನಿಕ ಔಷಧಗಳ‌ನ್ನು ನಿಷೇಧ ಮಾಡಲು ಮುಂದಾಗಿದೆ. ಸರ್ಕಾರ ನಿಷೇಧಕ್ಕೆ ನಿಗದಿಪಡಿಸಿದ ಕ್ಲೋರೊಫೆರಿಫಾಸ್, ಮ್ಯಾಂಕೋಝೆಬ್ ಸೇರಿದಂತೆ 27 ಕೀಟನಾಶಕ ಔಷಧಗಳನ್ನು ಬಳಸಿದರೆ ಮಾತ್ರ ಉತ್ತಮ ಫಲಸು ರೈತರ ಕೈ ಸೇರುತ್ತಿತು. ಹೀಗಾಗಿ ರೈತರು ಕೂಡ ಸರ್ಕಾರದ ನಿರ್ಧಾರಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಪರ್ಯಾಯ ಔಷಧ ಖರೀದಿಗೆ ಹೋದರೆ ದುಬಾರಿ ಬೆಲೆ ಕೊಡಬೇಕು. ಸರ್ಕಾರ ಅಗ್ಗದ ಬೆಲೆಯಲ್ಲಿ ಬೆಳೆಗಳಿಗೆ ಸಿಂಪಡಣೆ ಮಾಡುವ ಔಷಧಗಳನ್ನು ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಕೇಂದ್ರದ ಈ‌ ನಿರ್ಧಾರಕ್ಕೆ ರೈತರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತ ರಾಸಾಯನಿಕ ಮಾರಾಟಗಾರು ಸರ್ಕಾರ ನಿಷೇಧ ಮಾಡಿರುವ ಔಷಧಗಳ ಬಗ್ಗೆ ಮಾಹಿತಿ ನೀಡಿ ಪರ್ಯಾಯ ಔಷಧಗಳ ಸಿಂಪಡಣೆ ಕುರಿತಾಗಿ ರೈತರಿಗೆ ಸಲಹೆ ನೀಡಿದರೂ ದುಬಾರಿ ಬೆಲೆ ಕೊಟ್ಟು ಖರೀದಿಗೆ ಮುಂದಾಗುತ್ತಿಲ್ಲವಂತೆ. ಹೀಗಾಗಿ ಸರ್ಕಾರ ಹಾಗೂ ಕೃಷಿ ಇಲಾಖೆಯವರು ರೈತರಿಗೆ ಅಗ್ಗದ ಬೆಲೆಗೆ ಸಿಗುವ ರಾಸಾಯನಿಕ ಔಷಧಗಳ ಸಿಂಪಡಣೆ ಬಗ್ಗೆ ಸ್ಪಷ್ಟ ನಿರ್ದೇಶನ ಮಾಡಬೇಕು. ಇಲ್ಲವಾದರೆ ನಾವು ಗ್ರಾಹಕರ ಕೊರತೆ ಎದುರಿಬೇಕಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ನಾವು ಸರ್ಕಾರ ನಿರ್ದೇಶನ ಮಾಡಿರುವ ಕೀಟನಾಶಕ ಬಳಕೆ ಮಾಡಬೇಡಿ ಎಂದು ರೈತರಿಗೆ ಹಾಗೂ ಮಾರಾಟಗಾರರಿಗೆ ತಿಳುವಳಿಕೆ ನೀಡುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪರ್ಯಾಯ ಕೀಟನಾಶಕ ಮಾರಾಟ ಮತ್ತು ಬಳಕೆಗೆ ಸರ್ಕಾರದಿಂದ ಯಾವುದೇ ಅಭ್ಯಂತರ ಇಲ್ಲ ಎಂದಿದ್ದಾರೆ.

ABOUT THE AUTHOR

...view details