ವಿಜಯಪುರ: ಸ್ಟೋನ್ ಕ್ರಷರ್ ಹೊರ ಸೂಸುವ ಧೂಳಿನಿಂದ ರೈತರ ಫಲವತ್ತಾದ ಬೆಳೆಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಕ್ರಷರ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದ್ದಾರೆ.
ಸ್ಟೋನ್ ಕ್ರಷರ್ ಬಂದ್ ಮಾಡುವಂತೆ ರೈತರ ಮನವಿ - Viajayapura news
ಸುಮಾರು 400 ಎಕರೆ ಕೃಷಿ ಭೂಮಿಗೆ ಸ್ಟೋನ್ ಕ್ರಷರ್ ಮಾರಕವಾಗಿದೆ. ಇದರಿಂದ ಸಾಲ ಸೂಲ ಮಾಡಿ ಬಿತ್ತನೆ ಮಾಡಿರುವ ಬೆಳೆ ಕ್ರಷರ್ ಧೂಳಿಗೆ ತತ್ತರಿಸುವಂತಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಜಯಪುರ ಜಿಲ್ಲೆಯ ಕೋಲ್ಹಾರದ ರೈತರು, ಸ್ಥಳೀಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯ ಕೋಲ್ಹಾರ ತಾಲೂಕಿನ ಹಣಮಾಪುರ ಗ್ರಾಮ ವ್ಯಾಪ್ತಿಗೆ ಬರುವ ಬೂಳೂತಿಯಲ್ಲಿರುವ ಸರ್ವೆ ನಂ.174 ಮತ್ತು 175ರಲ್ಲಿರುವ ಸ್ಟೋನ್ ಕ್ರಷರ್‌ಗಳಿಂದ 60ಕ್ಕೂ ಅಧಿಕ ರೈತರ ಜಮೀನುಗಳಿಗೆ ಧೂಳು ಬೀಳುತ್ತಿದ್ದು, ರೈತರ ಬೆಳೆಗಳು ನಾಶವಾಗುತ್ತಿದೆ. ಇದರಿಂದ ಸುತ್ತ ಮುತ್ತಲಿನ ಭಾಗದ ರೈತರ ಆರೋಗ್ಯಕ್ಕೂ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಸುಮಾರು 400 ಎಕರೆ ಕೃಷಿ ಭೂಮಿಗೆ ಕ್ರಷರ್ ಮಾರಕವಾಗಿದೆ. ಇದರಿಂದ ಸಾಲ ಸೂಲ ಮಾಡಿ ಬಿತ್ತನೆ ಮಾಡಿರುವ ಬೆಳೆ ಕ್ರಷರ್ ಧೂಳಿಗೆ ತತ್ತರಿಸುವಂತಾಗಿವೆ. ಈ ಬಗ್ಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಸ್ಥಳೀಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.
2015 ರಿಂದ ಹಲವು ಅಧಿಕಾರಿಗಳಿಗೆ ಕ್ರಷರ್ ಬಂದ್ ಮಾಡುವಂತೆ ಮನವಿ ಮಾಡಿಕೊಂಡರೂ, ಈವರೆಗೆ ಕ್ರಮಕ್ಕೆ ಮಾತ್ರ ಮುಂದಾಗಿಲ್ಲ. ಸ್ಟೋನ್ ಕ್ರಷರ್ನಿಂದ ಪಕ್ಕದಲ್ಲಿರುವ ಮನೆಗಳು ಬಿರುಕುಗೊಳ್ಳುತ್ತಿದ್ದು, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕ್ರಷರ್‌ಗಳ ಹಾವಳಿ ಮುಂದುವರಿದರೆ, ರೈತರು ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ ಎಂದು ರೈತರು ಕ್ರಷರ್ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ವೈಎಸ್ ಪಾಟೀಲಗೆ ಮನವಿ ಸಲ್ಲಿಸಿದ್ದಾರೆ.