ವಿಜಯಪುರ: ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಅನ್ನದಾತ ತೊಗರಿ ಬೆಳೆ ನಂಬಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾನೆ. ಆದರೆ, ಈ ಬಾರಿ ಅನಾವೃಷ್ಠಿ ಹಾಗೂ ಅತಿವೃಷ್ಠಿ ಜತೆಗೆ ಮಂಜು ಕವಿದ ವಾತಾವರಣದಿಂದ ತೊಗರಿ ಬೆಳೆ ಹಾಳಾಗಿದೆ. ಅಳಿದುಳಿದ ಬೆಳೆಯನ್ನು ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿಸಲು ಹಿಂದೇಟು ಹಾಕುತ್ತಿರುವ ಕಾರಣ ಅನ್ನದಾತ ಕಂಗಾಲಾಗಿದ್ದಾನೆ.
ಸರ್ಕಾರ ಕೇವಲ 7 ರಿಂದ 15 ಕ್ವಿಂಟಾಲ್ ತೊಗರಿ ಖರೀದಿ ಮಾಡಲು ಮುಂದಾಗಿದೆ. ಉಳಿದ ತೊಗರಿ ಬೆಳೆ ಏನು ಮಾಡಬೇಕು ಎನ್ನುವುದೇ ಚಿಂತೆಗೀಡಾಗಿದೆ. ಜಿಲ್ಲೆಯಲ್ಲಿ 4.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗಿದೆ.
6300 ರೂ. ಬೆಂಬಲ ಬೆಲೆ ನೀಡಿ ಒಬ್ಬ ರೈತನಿಂದ15ಕ್ವಿಂಟಾಲ್ ತೊಗರಿ ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಆದರೆ, ಅನ್ನದಾತರು ಕನಿಷ್ಠ 20 ಕ್ವಿಂಟಾಲ್ ತೊಗರಿಯನ್ನಾದರೂ ಖರೀದಿ ಮಾಡಬೇಕು. ಬೆಂಬಲ ಬೆಲೆ ಸಹ ಹೆಚ್ಚಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.