ವಿಜಯಪುರ: ಕ್ರಷರ್ ಧೂಳು ಹಾಗೂ ಕಲ್ಲುಗಳು ಬೆಳೆಯ ಮೇಲೆ ಬಿಳುತ್ತಿವೆ. ತಕ್ಷಣವೇ ಕ್ರಷರ್ ಬಂದ್ ಮಾಡಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಕೋಲಾರದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸ್ಟೋನ್ ಕ್ರಷರ್ ಯಂತ್ರಗಳಿಂದ ಹೊರ ಸೂಸುವ ಧೂಳು ರೈತರ ಬೆಳೆಗಳ ಮೇಲೆ ಬಿಳುತ್ತಿದೆ. ಹೀಗಾಗಿ ಕೋಲಾರದ ಮಹಾದೇವಪ್ಪನ ಗುಡ್ಡದ ಪಕ್ಕದಲ್ಲಿರುವ ಜಮೀನುಗಳಲ್ಲಿ ಸರಿಯಾಗಿ ರೈತರು ಬೆಳೆ ತೆಗೆಯಲಾಗುತ್ತಿಲ್ಲ. ಕಳೆದ ಅನೇಕ ಬಾರಿ ಅಧಿಕಾರಿಗಳಿಗೆ ಕ್ರಷರ್ ಬಂದ್ ಮಾಡಿಸುವ ಕುರಿತು ಮನವಿ ಮಾಡಿದರು. ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.
ಕ್ರಷರ್ ಬಂದ್ ಮಾಡಿಸುವಂತೆ ಜಿಲ್ಲಾಧಿಕಾರಿಗೆ ರೈತರ ಮನವಿ ಕ್ರಷರ್‌ಗಳಿಗೆ ಬೇಕಾಗುವ ಕಲ್ಲುಗಳನ್ನ ಭೂಮಿಯಿಂದ ಅಗೆಯುವಾಗ ಬ್ಲಾಸ್ಟಿಂಗ್ ಮಾಡುತ್ತಾರೆ . ಹೀಗಾಗಿ ರೈತರ ಜಮೀನ ಮೇಲೆ ಕಲ್ಲುಗಳು ಬಿಳುವುರಿಂದ ಸುಮಾರು 100 ಎಕರೆ ಜಮೀನನಲ್ಲಿ ರೈತರ ಅಪಾರ ಪ್ರಮಾಣ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ರೈತರು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ಮುಂದೆ ಅಳಲನ್ನ ತೋಡಿಕೊಂಡರು.
ತಕ್ಷಣವೇ ಕ್ರಷರ್‌ಗಳನ್ನ ಬಂದ್ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನ ಸರಿ ಪಡಿಸುವಂತೆ ರೈತರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು. ಈ ಕುರಿತು ಸಂಭಂದಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ ರೈತರಿಗೆ ಭರವಸೆ ನೀಡಿದರು.