ವಿಜಯಪುರ: ವಿದ್ಯುತ್ ಪರಿವರ್ತಕ (ಟಿಸಿ)ವನ್ನು ಸರಿ ಮಾಡಿಸಲು ಎತ್ತಿನ ಬಂಡಿಯ ಮೂಲಕ ತುಂಬಿ ಹರಿಯುತ್ತಿರುವ ನದಿ ಮೂಲಕ ರೈತರು ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.
ತುಂಬಿದ ನದಿಯಲ್ಲಿ ರೈತರ ಸಾಹಸ: ಬಂಡಿ ಮುಳುಗಿದ್ರೂ ದಡ ಸೇರಿಸಿದ ಎತ್ತುಗಳು! - ಕೃಷ್ಣಾ ನದಿಯ ಪ್ರವಾಹ
ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟು ಹೋಗಿದ್ದ ಟಿಸಿಯನ್ನು ಸರಿಮಾಡಿಸಲು ತುಂಬಿ ಹರಿಯುತ್ತಿರುವ ನದಿ ಮೂಲಕ ರೈತರು ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿಯಲ್ಲಿ ನಡೆದಿದೆ.
ಕೃಷ್ಣಾ ನದಿಯ ಪ್ರವಾಹದ ನೀರಿನಲ್ಲಿ ಮುಳುಗಿ ಸುಟ್ಟು ಹೋಗಿದ್ದ ಟಿಸಿಯನ್ನು ಸರಿಮಾಡಿಸಲು ರೈತರು ತೆಗೆದುಕೊಂಡು ಹೋಗಿದ್ದಾರೆ. ಇದನ್ನ ಸ್ಥಳಾಂತರಿಸಲು ರೈತರು, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೃಷ್ಣಾ ನದಿ ಪ್ರವಾಹದಿಂದ ಸಂಗ್ರಹಗೊಂಡ ನೀರಿನಲ್ಲಿ ಎತ್ತಿನ ಬಂಡಿ ಸಮೇತ ಟಿಸಿಯನ್ನು ರೈತರು ಹೊತ್ತೊಯ್ದಿದ್ದಾರೆ.
ನೀರಲ್ಲಿ ಎತ್ತಿನ ಗಾಡಿ ಪೂರ್ತಿ ಮುಳುಗಿದ್ರೂ ಎತ್ತುಗಳು ಈಜಿಕೊಂಡು ಹೋಗಿ ದಡ ಸೇರಿವೆ. ತಂಗಡಗಿ ಶಾಖೆಯ ಸೆಕ್ಷನ್ ಅಧಿಕಾರಿ ಎಂ.ಎಸ್.ತೆಗ್ಗಿನಮಠ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಟಿಸಿ ಸ್ಥಳಾಂತರಕ್ಕೆ ಕಮಲದಿನ್ನಿಯ ರೈತರಾದ ಚನ್ನಪ್ಪ ವಾಲೀಕಾರ, ಯಲ್ಲನಗೌಡ ಬಿರಾದಾರ, ಪಾಂಡು ಮಳಗೌಡರ, ಪರಸಪ್ಪ ಗೌಡರ, ಹಣಮಗೌಡ ಪಾಟೀಲ ಅವರಿಗೆ ನಾಲತವಾಡ ಹಾಗೂ ತಂಗಡಗಿ ಶಾಖೆಗಳ ಸಿಬ್ಬಂದಿ ಸಾಥ್ ನೀಡಿದ್ದಾರೆ.