ಕರ್ನಾಟಕ

karnataka

ETV Bharat / state

ಪೊಲೀಸರ ಎದುರೇ ವಿಷ ಕುಡಿಯಲು ಮುಂದಾದ ರೈತ, ಆಮೇಲೇನಾಯ್ತು...? - ಪೊಲೀಸರ ಎದುರೇ ವಿಷ ಕುಡಿಯಲು ಮುಂದಾದ ರೈತ

ಬೆಳೆವಿಮೆ ಒದಗಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ದೊರೆಯದ ಕಾರಣ ಬಸರಕೋಡದ ಗೌಡಪ್ಪಗೌಡ ಬೊಮ್ಮಣ ಜೋಗಿಯಿಂದ ವಿಷದ ಬಾಟಲಿ ಪ್ರದರ್ಶನ ಮಾಡಲಾಯಿತು.

ರೈತ ವಿಷದ ಬಾಟಲಿ ಪ್ರದರ್ಶನ ಮಾಡುತ್ತಿರುವುದು

By

Published : Sep 11, 2019, 10:14 PM IST

ವಿಜಯಪುರ :ಮುದ್ದೇಬಿಹಾಳ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ರೈತನೊಬ್ಬ ವಿಷದ ಬಾಟಲಿ‌ ಪ್ರದರ್ಶನ ಮಾಡಿದ ಘಟನೆ ನಡೆದಿದೆ.

ಬೆಳೆವಿಮೆ ಒದಗಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಅಧಿಕಾರಿಗಳಿಂದ ಸಕಾರಾತ್ಮಕ ಉತ್ತರ ದೊರೆಯದ ಕಾರಣ ಬಸರಕೋಡದ ಗೌಡಪ್ಪಗೌಡ ಬೊಮ್ಮಣ ಜೋಗಿಯಿಂದ ವಿಷದ ಬಾಟಲಿ ಪ್ರದರ್ಶನ ಮಾಡಲಾಯಿತು.

ಪೊಲೀಸರ ಎದುರೇ ವಿಷ ಕುಡಿಯಲು ಮುಂದಾದ ರೈತ

ಐಪಿಎಂಸಿ ಅಧ್ಯಕ್ಷ, ನಿರ್ದೇಶಕ, ತಹಸೀಲ್ದಾರ್, ಸಿಪಿಐ, ಪಿಎಸ್​​ಐ ಎದುರಿಗೆ ವಿಷದ ಬಾಟಲಿ ಪ್ರದರ್ಶನ ಮಾಡಿದಾಗ ತಕ್ಷಣ ಪೊಲೀಸರು ವಿಷದ ಬಾಟಲಿ ಕಸಿದುಕೊಂಡರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ರೈತ ಗೌಡಪ್ಪಗೌಡ ಬೊಮ್ಮಣಜೋಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೈತರಿಗೆ ಆಗುತ್ತಿರುವ ತೊಂದರೆಯನ್ನು ವಿವರಿಸಿದರು.

ABOUT THE AUTHOR

...view details