ವಿಜಯಪುರ :ಸಾಲ ಬಾಧೆ ತಾಳದೇ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಸಾಲ ಬಾಧೆ : ಆತ್ಮಹತ್ಯೆಗೆ ಶರಣಾದ ರೈತ - kannada news
ಬೆಳೆದ ಬೆಲೆ ಕೈ ಗೆ ಬಾರದೆ ಸಾಲ ಮರುಪಾವತಿ ಮಾಡಲಾಗದೆ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
![ಸಾಲ ಬಾಧೆ : ಆತ್ಮಹತ್ಯೆಗೆ ಶರಣಾದ ರೈತ](https://etvbharatimages.akamaized.net/etvbharat/prod-images/768-512-3219074-thumbnail-3x2-farmer.jpg)
ಸಾಲ ಬಾಧೆ ತಾಳದೆ ರೈತ ಆತ್ಮಹತ್ಯೆ
ಜಿಲ್ಲೆಯ ಬೊಮ್ಮನಹಳ್ಳಿಯ ಭೀಮಾಶಂಕರ ಬಿರಾದಾರ್ (45) ಆತ್ಮಹತ್ಯೆ ಮಾಡಿಕೊಂಡ ರೈತ. ದೇವರನಾವದಗಿ ಗ್ರಾಮೀಣ ಬ್ಯಾಂಕ್ನಲ್ಲಿ ಬತ್ತಿ ಹೋದ ಬಾವಿ ಹಾಗೂ ಬೋರವೇಲ್ ನೀರು ಹರಿಸಲು 2 ಲಕ್ಷ ರೂ ಸಾಲ ಪಡೆದುಕೊಂಡಿದ್ದ.
ಕಳೆದ 2-3 ವರ್ಷದಿಂದ ಮಳೆ ಕೈಕೊಟ್ಟ ಕಾರಣ ಬೆಳೆ ಬಾರದೆ ಲಕ್ಷಾಂತರ ರೂ. ಹಾನಿಯಾಗಿದ್ದು, ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.