ವಿಜಯಪುರ:ರೈತರ ಸಮಸ್ಯೆ, ನೆರೆ ಸಂಬಂಧ ಸಿಎಂಗೆ ಮನವಿ ನೀಡಲು ಮುಂದಾಗಿದ್ದ ರೈತ ಮುಖಂಡರನ್ನು ಪೊಲೀಸರು ತಡೆದ ಘಟನೆ ಆಲಮಟ್ಟಿ ಜಲಾಶಯದ ಮುಖ್ಯ ದ್ವಾರದಲ್ಲಿ ನಡೆದಿದೆ.
ಸಿಎಂ ಭೇಟಿಗೆ ಆಗ್ರಹಿಸಿ ರೈತರ ಪ್ರತಿಭಟನೆ ಪ್ರವಾಹ ಪರಿಸ್ಥಿತಿ ಅರಿಯಲು ಸಿಎಂ ಯಡಿಯೂರಪ್ಪ ಮಧ್ಯಾಹ್ನ ಆಲಮಟ್ಟಿಗೆ ಆಗಮಿಸಿದ್ದರು. ಈ ವೇಳೆ, ಕೃಷ್ಣೆಗೆ ಬಾಗಿನ ಅರ್ಪಿಸಲು ಜಲಾಶಯದ ಕಡೆಗೆ ತೆರಳಿದ್ದಾಗ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲು ಆಗಮಿಸಿದ್ದರು. ಆದ್ರೆ ಪೊಲೀಸರು ರೈತರನ್ನು ಸಿಎಂ ಬಳಿ ಹೋಗದಂತೆ ಮನವಿ ಮಾಡಿದರು.
ಸಿಎಂ ಭೇಟಿಗೆ ಆಗ್ರಹಿಸಿ ರೈತರ ಪ್ರತಿಭಟನೆ ರೈತರು ಆಲಮಟ್ಟಿ ಜಲಾಶಯದ ಬಳಿಯ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಲು ಮುಂದಾದ ವೇಳೆ, ಪೊಲೀಸರ ಮಧ್ಯೆ ನೂಕಾಟ ತಳ್ಳಾಟ ನಡೆಯಿತು. ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ, ಕೆಲ ಹೊತ್ತು ವಾಗ್ವಾದ ಸಹ ನಡೆಯಿತು.
ಸಿಎಂ ಭೇಟಿಗೆ ಆಗ್ರಹಿಸಿ ರೈತರ ಪ್ರತಿಭಟನೆ ಬಾಗಲಕೋಟೆ ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಬಳಿಕ ಆಲಮಟ್ಟಿ ಜಲಾಶಯದ ಎದುರು ರೈತರು ಪ್ರತಿಭಟನೆ ನಡೆಸಿ ಸಿಎಂ ಭೇಟಿಗೆ ಪಟ್ಟು ಹಿಡಿದರು. ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.