ವಿಜಯಪುರ :ವೀಕೆಂಡ್ ಕರ್ಫ್ಯೂ ಹಿನ್ನೆಲೆ ತರಕಾರಿ ಮಾರಲು ಬಂದ ರೈತನೊಬ್ಬ ಆಕ್ರೋಶಗೊಂಡು ತರಕಾರಿಯನ್ನು ರಸ್ತೆಯಲ್ಲಿ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಇಂದು (ಭಾನುವಾರ) ತರಕಾರಿ ಮಾರುಕಟ್ಟೆಯನ್ನ ಪೊಲೀಸರು ಬಂದ್ ಮಾಡಿದ್ದರಿಂದ ರೈತರೊಬ್ಬರು ಆಕ್ರೋಶಗೊಂಡು ರಸ್ತೆಯಲ್ಲಿಯೇ ತರಕಾರಿ ಚೆಲ್ಲಿ ಕಿಡಿಕಾರಿದ್ದಾನೆ.
ರೈತ ಭೀಮನಗೌಡ ಬಿರಾದಾರ ಎಂಬುವರು ಹಳ್ಳಿಯಿಂದ ತರಕಾರಿಯನ್ನು ತಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾದಾಗ ಪೊಲೀಸರು ತಡೆದಿದ್ದಾರೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಮಾರುಕಟ್ಟೆ ಬಂದ್ ಮಾಡಲಾಗಿದೆ. ತರಕಾರಿ ತೆಗೆದುಕೊಂಡು ಹೋಗು ಎಂದು ಸೂಚನೆ ನೀಡಿದ್ದಾರೆ.
ಆದರೆ, ರೈತ ಭೀಮನಗೌಡ ಬಿರಾದಾರ ತಾನು ಬೆಳೆದ ತರಕಾರಿ ಮಾರಾಟ ಮಾಡಲು ಸ್ವಲ್ಪ ಅವಕಾಶ ನೀಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಇದಕ್ಕೆ ಒಪ್ಪದ ಪೊಲೀಸರು ಮಾರುಕಟ್ಟೆ ಬಂದ್ ಮಾಡಿಸಿದ್ದಾರೆ.