ವಿಜಯಪುರ: ಸಿಂದಗಿ ತಾಲೂಕಿನ ಕುರತ್ತಹಳ್ಳದಲ್ಲಿ ಜುಲೈ 7ರಂದು ರಾತ್ರಿ ಕೊಚ್ಚಿ ಹೋಗಿದ್ದ ರೈತನ ಶವ ಇಂದು ಹಳ್ಳದ ಮುಳ್ಳುಗಂಟಿಯಲ್ಲಿ ದೊರೆತಿದೆ.
ಮೃತ ವ್ಯಕ್ತಿಯನ್ನು ಕುರತ್ತಹಳ್ಳಿ ನಿವಾಸಿ ಬಸವಂತರಾಯ ಅಂಬಾಗೋಳ (55) ಎಂದು ಗುರುತಿಸಲಾಗಿದೆ. ಸತತ ನಾಲ್ಕು ದಿನಗಳ ಕಾಲ ಕಾರ್ಯಾಚರಣೆ ನಡೆಸುತ್ತಿದ್ದ ತಾಲೂಕಾಡಳಿತ ಸಿಬ್ಬಂದಿಗೆ ಶವ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನಾಡದೋಣಿ ಬಳಸಿ ಹುಡುಕಾಟ ನಡೆಸಿ ಕೊನೆಗೂ ಯಶಸ್ವಿಯಾಗಿದೆ.