ವಿಜಯಪುರ:ಸಾಲಬಾಧೆ ತಾಳದೆ ರೈತನೊಬ್ಬ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ವಿಜಯಪುರದಲ್ಲಿ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ! - ವಿಜಯಪುರ ಜಿಲ್ಲೆಯ ಚಡಚಣ
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಖಬುಲಸಾಬ ಮಹಿಬೂಬಸಾಬ ಶೇಖ ಎಂಬ ರೈತ ಸಾಲಬಾಧೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಲಬಾಧೆಗೆ ರೈತ ಆತ್ಮಹತ್ಯೆ
ಹಲಸಂಗಿ ಗ್ರಾಮದ ಖಬುಲಸಾಬ್ ಮಹಿಬೂಬಸಾಬ್ ಶೇಖ್ (35) ಆತ್ಮಹತ್ಯೆ ಮಾಡಿಕೊಂಡ ರೈತ. ಇವರಿಗೆ 2.5 ಎಕರೆ ಜಮೀನಿತ್ತು.
ಅದನ್ನು ಸಾಗುವಳಿ ಮಾಡಲು ತೆಗೆದುಕೊಂಡಖಬುಲಸಾಬ್ ಮಹಿಬೂಬಸಾಬ್ ಶೇಖ್ ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.