ಕರ್ನಾಟಕ

karnataka

ETV Bharat / state

ಕಷ್ಟಪಟ್ಟು ಬೆಳೆದ ಬಾಳೆಗೆ ಬೆಲೆ ಇಲ್ಲ: ಇಡೀ ತೋಟಕ್ಕೆ ಬೆಂಕಿಯಿಟ್ಟು ರೈತನ ಹತಾಶೆ - 1200 ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಸರ್ಕಾರಕ್ಕೆ ಹಿಡಿಶಾಪ

ಲಾಕ್​ಡೌನ್​ ಕಾರಣದಿಂದ ಬಾಳೆ ಹಣ್ಣಿನ ಬೆಳೆಗೆ ಮಾರುಕಟ್ಟೆ ಸಿಗದ ಕಾರಣ ರೈತನೊಬ್ಬ ತನ್ನ ಬಾಳೆ ತೋಟಕ್ಕೆ ಬೆಂಕಿ ಹಚ್ಚಿದ್ದಾನೆ.

vijayapura
ಬಾಳೆಗೆ ಬೆಂಕಿ

By

Published : Jun 9, 2021, 12:49 PM IST

ವಿಜಯಪುರ: ಕೋವಿಡ್ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಾಳೆಹಣ್ಣಿಗೆ ಬೆಲೆ ಸಿಗದಿರುವುದಕ್ಕೆ ಮನನೊಂದು ಅನ್ನದಾತನೊಬ್ಬ 1,200 ಬಾಳೆ ಗಿಡ ಸುಟ್ಟುಹಾಕಿದ ಘಟನೆ ನಡೆದಿದೆ.

ಬಾಳೆಗೆ ಬೆಂಕಿ ಹಚ್ಚಿದ ರೈತ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದ ರೈತ ಉಸ್ಮಾನ್ ಸಾಬ್ ಹೆಚ್ಚಾಳ ತನ್ನ ಹೊಲದಲ್ಲಿನ 1,200ಕ್ಕೂ ಹೆಚ್ಚು ಬಾಳೆ ಗಿಡಗಳಿಗೆ ಬೆಂಕಿ ಹಚ್ಚಿ ಅಸಹಾಯಕತೆ ವ್ಯಕ್ತಪಡಿಸಿದ್ದಾನೆ.

ಕಷ್ಟಪಟ್ಟು ಮೂರು ವರ್ಷಗಳಿಂದ ಮಕ್ಕಳಂತೆ ಜೋಪಾನ ಮಾಡಿ ಬೆಳೆದ ಬಾಳೆಗೆ ಬೆಲೆಯಿಲ್ಲ. ಹೀಗಾಗಿ ಕೆಲವನ್ನು ದಾನ ಮಾಡಿದ್ದು, ಉಳಿದ ಬಾಳೆ ಗಿಡಗಳನ್ನೆಲ್ಲಾ ಸುಟ್ಟು ಹಾಕಿದ್ದಾನೆ. ಕೊರೊನಾ ಮಹಾಮಾರಿ ತಂದಿಟ್ಟ ಸಂಕಷ್ಟ ರೈತರನ್ನು ಹೈರಾಣಾಗಿಸಿದೆ.

ABOUT THE AUTHOR

...view details