ವಿಜಯಪುರ:ಚಡಚಣ ಬಳಿಯ ಹತ್ತಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು 45 ವರ್ಷದ ಧರೆಪ್ಪ ಧರ್ಮಪ್ಪ ಬಿರಾದಾರ ಮೃತಪಟ್ಟಿದ್ದಾನೆ. ಜೋಡೆತ್ತಿನ ಗಾಡಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಚಡಚಣ ತಹಶೀಲ್ದಾರ್ ಸುರೇಶ್ ಚವಲರ, ಪಿಎಸ್ಐ ಎಂ.ಎ.ಸತಿಗೌಡರ ಭೇಟಿ ನೀಡಿ ಪರಿಶೀಲಿಸಿದರು.
ಸಿಡಿಲು ಬಡಿದು ಓರ್ವ ರೈತ, ಮೂರು ಕುರಿಗಳು ಸಾವು - ವಿಜಯಪುರ ಲೇಟೆಸ್ಟ್ ನ್ಯೂಸ್
ಸಿಡಿಲು ಬಡಿದು ಓರ್ವ ರೈತ, ಮೂರು ಕುರಿಗಳು ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
![ಸಿಡಿಲು ಬಡಿದು ಓರ್ವ ರೈತ, ಮೂರು ಕುರಿಗಳು ಸಾವು lightning](https://etvbharatimages.akamaized.net/etvbharat/prod-images/768-512-9249098-thumbnail-3x2-sheep.jpg)
ಸಿಡಿಲು ಬಡಿದು ಓರ್ವ ರೈತ, ಮೂರು ಕುರಿಗಳು ಸಾವು
ಸಿಡಿಲಿಗೆ ಕುರಿಗಳು ಬಲಿ
ನಿಡಗುಂದಿ ತಾಲೂಕಿನ ಕೂಡಗಿ ಗ್ರಾಮದಲ್ಲಿ ಸಿಡಿಲಿಗೆ ಮೂರು ಕುರಿಗಳು ಬಲಿಯಾಗಿವೆ. ಕೂಡಗಿನ ದ್ಯಾಮಣ್ಣ ಮನಗೂಳಿ ಎಂಬುವವರಿಗೆ ಸೇರಿರುವ ಕುರಿಗಳು ಇವಾಗಿವೆ. ಈ ಕುರಿತು ಎನ್ಟಿಪಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.