ವಿಜಯಪುರ:ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ-ಆರೋಗ್ಯ ರಕ್ಷಣೆ ಘೋಷ ವಾಕ್ಯದಡಿ ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದು ಕೃಷಿ ಮಹಾವಿದ್ಯಾಲಯದ ಮುಖ್ಯಸ್ಥ ಎಸ್.ಬಿ ಕಲಘಟಗಿ ಹೇಳಿದರು.
ಜ.4 ರಿಂದ 6 ರವರೆಗೆ ವಿಜಯಪುರದಲ್ಲಿ ಕೃಷಿಮೇಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಬಿ ಕಲಘಟಗಿ, ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಜನವರಿ 4, 5 ಹಾಗೂ 6ರಂದು ನಗರದ ಹೊರವಲದ ಹಿಟ್ಟಿನಹಳ್ಳಿ ಮಹಾವಿದ್ಯಾಲಯದ ಆವರಣದಲ್ಲಿ ಕೃಷಿ ಮೇಳ ನಡೆಯಲಿದೆಯೆಂದರು.
ಜನವರಿ 4ರಂದು ಮಣ್ಣಿನ ಆರೋಗ್ಯ ಕೃಷಿಯ ಸೌಭಾಗ್ಯ ಕುರಿತು ಕವಿಗೊಷ್ಟಿ ಹಾಗೂ ಆಕಳು ಎಮ್ಮೆಯ ಪ್ರದರ್ಶನ ನಡೆಯಲಿದೆ. ಜನವರಿ 5 ರಂದು ಸಿರಿಧಾನ್ಯ ಬಳಕೆಯ ಕುರಿತು ಕವಿಗೋಷ್ಟಿ, ಬೆಳೆಗಳ ಸಂರಕ್ಷಣೆ ಕುರಿತು ತಂತ್ರಜ್ಞಾನದ ಮಾಹಿತಿ ಹಾಗೂ ಶ್ವಾನ ಪ್ರದರ್ಶನ ನಡೆಯಲಿದೆ. ಜನವರಿ 6ರಂದು ಆಧುನಿಕ ಯಂತ್ರೋಪಕರಣಗಳ ಮಹತ್ವದ ಕುರಿತು ಕವಿಗೋಷ್ಠಿ ಹಾಗೂ ಕುರಿ ಮತ್ತು ಆಡುಗಳ ಪ್ರದರ್ಶನ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಇನ್ನೂ ಕೃಷಿ ಮೇಳ ಕಾರ್ಯಕ್ರಮದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್, ಶಾಸಕ ದೇವಾನಂದ ಚವ್ಹಾಣ ಸೇರಿದಂತೆ ಇತರೆ ಜನ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.