ಕರ್ನಾಟಕ

karnataka

ETV Bharat / state

ಬಿಎಸ್​ವೈ ತಂತಿ ಮೇಲಿನ ನಡಿಗೆ ಕುರಿತು ಎಂ.ಬಿ. ಪಾಟೀಲ್​ ಏನಂದ್ರು? - ನೆರೆ ಪರಿಹಾರ ನಿಧಿ

ಮುಖ್ಯಮಂತ್ರಿ ಯಡಿಯೂರಪ್ಪನವರು ತಂತಿ ಮೇಲೆ ನಡೆಯುತ್ತಿದ್ದಾರೋ ಅಥವಾ ಬೆಂಕಿ ಮೇಲೆ ನಡೆಯುತ್ತಿದ್ದಾರೋ ಗೊತ್ತಿಲ್ಲ. ಆದರೆ, ನೆರೆ ಪರಿಹಾರಕ್ಕೆ ಕೇಂದ್ರದಿಂದ ಅನುದಾನ ತರಲು ರಾಜ್ಯ ಎಲ್ಲ ಬಿಜೆಪಿ ನಾಯಕರು ವಿಫಲರಾಗಿದ್ದಾರೆ ಎಂದು ಹೇಳಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ

By

Published : Oct 1, 2019, 3:33 PM IST

ವಿಜಯಪುರ: ಯಡಿಯೂರಪ್ಪ ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ಯಡಿಯೂರಪ್ಪ ಅವರನ್ನು ಕೇಳಬೇಕು ಎಂದು ಮಾಧ್ಯಮದವರ ಪ್ರಶ್ನಿಯೊಂದಕ್ಕೆ ಹೀಗೆ ಉತ್ತರಿಸಿದರು.

ಮಾಜಿ ಸಚಿವ ಎಂ.ಬಿ.ಪಾಟೀಲ

ಕೇಂದ್ರದಿಂದ ನೆರೆ ಪರಿಹಾರ ನಿಧಿ ತರುವಲ್ಲಿ ರಾಜ್ಯ ಸರ್ಕಾರ ಹಾಗೂ ಸಂಸದರು ವಿಫಲವಾಗಿದ್ದಾರೆ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿಸುತ್ತಿದೆ. ಪ್ರವಾಹ ಪೀಡಿತರ ಕಣ್ಣಿರು, ಸಂಕಟ ಬಿಜೆಪಿ ನಾಯಕರನ್ನು ತಟ್ಟದೆ ಇದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಹೋರಾಟ ನಮ್ಮ ಅಸ್ಮಿತೆ. ಇದರಲ್ಲಿ ಎರಡು ಮಾತಿಲ್ಲ. ಜೈನ ಧರ್ಮಕ್ಕೆ ಮಾನ್ಯತೆ ನೀಡಿದಂತೆ ನಮ್ಮ ಧರ್ಮಕ್ಕೂ ಮಾನ್ಯತೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಹೇಳಿದರು.

ಗೆಲುವು ನಮ್ಮದೇ: ಅಥಣಿ ಉಪ‌ಚುನಾವಣೆಯಲ್ಲಿ ನಮ್ಮ ಗೆಲವು ನಿಶ್ಚಿತವಾಗಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ವಿರುದ್ಧ ಯಾರೇ ನಿಂತರು ಅವರ ಸೋಲು ಖಂಡಿತ. ಅಥಣಿ ಕ್ಷೇತ್ರದ ಉಸ್ತುವಾರಿ ನಾನಿದ್ದೇನೆ. ನನಗೆ ಅಲ್ಲಿನ ರಾಜಕೀಯ ಗೊತ್ತು. ನಮ್ಮ ವಿರುದ್ಧ ಯಾರೇ ನಿಂತರು ಅವರನ್ನು ಸೋಲಿಸುತ್ತೇವೆ ಎಂದರು.

ಬಿಜೆಪಿ ಹುಟ್ಟಿದ್ದೇ ಆರ್​ಎಸ್​ಎಸ್​ ಗರ್ಭದಿಂದ. ಅಲ್ಲಿ ಒಳಗಡೆ ಯಾರಿಗೂ ಪ್ರವೇಶವಿಲ್ಲ ಎಂದು ವ್ಯಂಗ್ಯವಾಡಿದರು.

ABOUT THE AUTHOR

...view details