ವಿಜಯಪುರ: ವೆಲ್ಡಿಂಗ್ ಮಾಡುವಾಗ ಎಥೆನಾಲ್ ಟ್ಯಾಂಕರ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ರೈಲ್ವೆ ನಿಲ್ದಾಣದ ಬಳಿಯ ನಾಡಗೌಡ ರೋಡಲೈನ್ಸ್ನಲ್ಲಿ ವೆಲ್ಡಿಂಗ್ ಮಾಡುವಾಗ ಟ್ಯಾಂಕರ್ ಬ್ಲಾಸ್ಟ್ ಆಗಿ ಈ ದುರ್ಘಟನೆ ನಡೆದಿದೆ. ವೀರೇಂದ್ರ ಪ್ರಜಾಪತಿ ಹಾಗೂ ರಾಜೀನಾಮೆ ಗಿಡ್ಡೆ ಮೃತ ಕಾರ್ಮಿಕರು. ಘಟನೆಯಲ್ಲಿ ಪ್ರಕಾಶ ಶಿರೋಳ, ವಿಶ್ವನಾಥ ಬಡಿಗೇರ ಹಾಗೂ, ಬಸವರಾಜ್ ಡೊಣೂರ್ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.