ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಾಲೋಅಪ್​.. ರಸ್ತೆ ವಿಭಜಕದ ಮಧ್ಯೆ ಬಂತು ಬೀದಿ ದೀಪ.. - ಈಟಿವಿ ಭಾರತ ಫಾಲೋಆಪ್

ತಾಳಿಕೋಟಿ ರಸ್ತೆಯಲ್ಲಿರುವ ಆಶ್ರಯ ಕಾಲೋನಿಯಿಂದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ತಂಗಡಗಿ ರಸ್ತೆಯ ಹಡಲಗೇರಿ ಕ್ರಾಸ್‌ವರೆಗೆ ಬೀದಿ ದೀಪ ಅಳವಡಿಸಲಾಗುತ್ತಿದೆ.

ETV Bharat report impact
ಬೀದಿ ದೀಪ ಕಂಬಗಳ ಅಳವಡಿಕೆ

By

Published : Jun 15, 2020, 2:39 PM IST

ಮುದ್ದೇಬಿಹಾಳ :ಕಳೆದ ಡಿಸೆಂಬರ್​​​​ನಲ್ಲಿಯೇ ಮುಗಿಯಬೇಕಿದ್ದ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಜೂನ್​​​ 5ರಂದು ಮುದ್ದೇಬಿಹಾಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕುಂಠಿತ...ಕಗ್ಗತ್ತಲ್ಲಿ ಜನರುಎಂದು ಈಟಿವಿ ಭಾರತ‌ದಲ್ಲಿ ವರದಿ ಬಿತ್ತರವಾಗುತ್ತಿದ್ದಂತೆ, ಎಚ್ಚೆತ್ತ ಗುತ್ತಿಗೆದಾರರು ಈಗ ಬೀದಿ ದೀಪ ಅಳವಡಿಸಲು ಮುಂದಾಗಿದ್ದಾರೆ.

ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ಆಶ್ರಯ ಕಾಲೋನಿಯಿಂದ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ತಂಗಡಗಿ ರಸ್ತೆಯ ಹಡಲಗೇರಿ ಕ್ರಾಸ್‌ವರೆಗೆ ಬೀದಿ ದೀಪ ಅಳವಡಿಸಲಾಗುತ್ತಿದೆ.

ಬೀದಿ ದೀಪ ಕಂಬಗಳ ಅಳವಡಿಕೆ ಕುರಿತು ಜನಾಭಿಪ್ರಾಯ

ಈ ಕುರಿತು ಮಾತನಾಡಿರುವ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ ಜಿ ವಿಜಯಕರ್, ಮಾಧ್ಯಮದಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ವರ್ಷದಿಂದ ಬಾಕಿಯಿದ್ದ ಕೆಲಸವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಹೀಗಾಗಿ ಈಟಿವಿ ಭಾರತಕ್ಕೆ ಅಭಿನಂದನೆ ಎಂದರು.

ಗೋನಾಳ ಗ್ರಾಮದ ಗ್ರಾಮಸ್ಥ ಸಂಗಮೇಶ ಮಾತನಾಡಿ, ಮುಖ್ಯರಸ್ತೆಯಲ್ಲಿ ಬೀದಿ ದೀಪ ಕಾಮಗಾರಿ ನಡೆಯುತ್ತಿದೆ. ಕಂಬಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಈಗಲೇ ಕಂಬಗಳು ಅಲುಗಾಡುತ್ತಿವೆ. ಹೀಗಾಗಿ ಗುಣಮಟ್ಟದ ಕಂಬಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details