ವಿಜಯಪುರ:ಎಪಿಎಂಸಿ ತರಕಾರಿ ಮಾರುಕಟ್ಟೆ ಮಳೆ ನೀರಿನಿಂದ ಕೊಳಚೆ, ಕೆಸರಿನಿಂದ ಕೂಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬರುವ ರೈತರಿಗೆ ಹಾಗೂ ವರ್ತಕರಿಗೆ ಸಾಂಕ್ರಾಮಿಕ ರೋಗ ಎದುರಾಗುತ್ತಿದೆ ಎಂದು ಈಟಿವಿ ಭಾರತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗಿದ್ದಾರೆ.
ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿಕೊಡುತ್ತಿದೆಯಾ ಎಪಿಎಂಸಿ ತರಕಾರಿ ಮಾರುಕಟ್ಟೆ ಎಂದು ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಬೆಳಗ್ಗೆಯಿಂದ ಹಿರಿಯ ಅಧಿಕಾರಿಗಳ ತಂಡ ತರಕಾರಿ ಮಾರುಕಟ್ಟೆ ಶುಚಿ ಕಾರ್ಯ ಮಾಡಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಳೆ ನೀರಿನಿಂದ ಕೂಡಿದ ಕೆಸರಿನ ಸ್ವಚ್ಛತೆಗೆ 6ಡಿ ದರ್ಜೆ ನೌಕಕರ ಮೂಲಕ ತೆರವಿಗೆ ಮುಂದಾಗಿದ್ದಾರೆ. ವರದಿ ಬಿತ್ತರಿಸಿದ 24 ಗಂಟೆಯೊಳಗೆ ಮಾರುಕಟ್ಟೆ ಸ್ವಚ್ಛತೆ ಮಾಡಲಾಗುತ್ತಿದೆ.