ಕರ್ನಾಟಕ

karnataka

ETV Bharat / state

ತಾಳಿಕೋಟಿ ಮುಕ್ತಿಧಾಮದಲ್ಲಿ ಶಿವನಮೂರ್ತಿ ಪ್ರತಿಷ್ಠಾಪನೆ - ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಶ್ರೀಗಳು

ತಾಳಿಕೋಟಿ ಪಟ್ಟಣದಲ್ಲಿ ಮುಕ್ತಿಧಾಮ ಸಮಿತಿ ವತಿಯಿಂದ ನಿನ್ನೆ ನೂತನ ಶಿವನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

Shiva
Shiva

By

Published : Jun 29, 2020, 10:37 AM IST

ಮುದ್ದೇಬಿಹಾಳ/ವಿಜಯಪುರ: ನಾನು ಎಂದು ಅಹಂ ಪಟ್ಟವರೆಲ್ಲಾ ಮುಕ್ತಿಧಾಮದಲ್ಲಿ ಮಣ್ಣಾಗಿದ್ದಾರೆ. ಉಸಿರು ನಿಂತು ಹೋದರೂ ಹೆಸರು ಅಜರಾಮರವಾಗಿ ಉಳಿಯುವಂತಹ ಕಾರ್ಯಗಳನ್ನು ಮಾಡಬೇಕು ಎಂದು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಶ್ರೀಗಳು ಹೇಳಿದರು.

ಮತಕ್ಷೇತ್ರದ ತಾಳಿಕೋಟಿ ಪಟ್ಟಣದಲ್ಲಿ ಮುಕ್ತಿಧಾಮ ಸಮಿತಿ ವತಿಯಿಂದ ನಿನ್ನೆ ನೂತನ ಶಿವನ ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮಿಕವಾದರೂ ಸಾವು ಎಂಬುದು ನಿಶ್ಚಿತವಾಗಿದೆ. ಇದರ ಮಧ್ಯೆ ಮನುಷ್ಯರಾದವರು ಮಾಡುವ ಸತ್ಕಾರ್ಯಗಳು ಭಗವಂತನ ಮುಡಿಗೇರಲಿವೆ ಎಂದರು.

ಶಿವನ ಮೂರ್ತಿ ನಿರ್ಮಾಣಕ್ಕೆ ಹಣ ನೀಡಿದ ರಾಮಸ್ವರೂಪ ಅಗರವಾಲ ಮತ್ತು ಸಹೋದರರನ್ನು, ಮೂರ್ತಿ ನಿರ್ಮಿಸಿದ ರಾಜಶೇಖರ ಮೇಗೇರಿ ಹಾಗೂ ಸಹಾಯಕ ಜಗದೀಶ ಕತ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಗೇಶ ವಿರಕ್ತಮಠ, ತಹಶೀಲ್ದಾರ್ ಅನಿಲಕುಮಾರ ಢವಳಗಿ, ಎಸ್.ಹೆಚ್. ಪವಾರ, ಡಾ.ವಿ.ಎಸ್. ಕಾರ್ಚಿ, ಡಾ.ಎನ್.ಎಲ್. ಶೆಟ್ಟಿ, ಚಿದಂಬರ ಭಕ್ಷಿ, ಕಾಶಿನಾಥ ಮುರಾಳ, ಕಾಶಿನಾಥ ಸಜ್ಜನ, ಎಂ.ಎಸ್. ಸರಶೆಟ್ಟಿ, ವಾಸುದೇವ ಹೆಬಸೂರ, ರಾಜಣ್ಣ ಸೊಂಡೂರ, ರಾಜು ಹಂಚಾಟೆ, ಮುತ್ತಪ್ಪ ಚಮಲಾಪುರ, ಅಶೋಕ ಹಂಚಲಿ, ಗುಂಡಣ್ಣ ಹಂದಿಗನೂರ, ಸಾಹೇಬಗೌಡ ಬಿರಾದಾರ ಸೇರಿದಂತೆ ವಿವಿಧ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ABOUT THE AUTHOR

...view details