ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಅಪಘಾತ ತಪ್ಪಿಸಲು ಅಟೋಮೆಟಿಕ್​ ಡ್ರೈವಿಂಗ್ ಟ್ರ್ಯಾಕ್ ಸ್ಥಾಪನೆ - ಬಿಎಲ್​ಡಿಇ ಸಂಸ್ಥೆ

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಶೇ 30-40ರಷ್ಟು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಅತಿ ಹೆಚ್ಚು ಬೈಕ್ ಸವಾರರಾಗಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಚಲಾವಣೆ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣ ಎಂದು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದರು.

establishment-of-automatic-driving-track-in-the-state-to-avoid-accidents
ರಾಜ್ಯದಲ್ಲಿ ಅಪಘಾತ ತಪ್ಪಿಸಲು ಅಟೋಮೆಟಿಕ್​ ಡ್ರೈವಿಂಗ್ ಟ್ರ್ಯಾಕ್ ಸ್ಥಾಪನೆ

By

Published : Mar 15, 2023, 7:07 PM IST

ವಿಜಯಪುರ:ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ಕಡಿಮೆಗೊಳಿಸಲು ಮುಂದಿನ ದಿನಗಳಲ್ಲಿ ಅಟೋಮೆಟಿಕ್ ಡ್ರೈವಿಂಗ್ ಟ್ರ್ಯಾಕ್ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಈ ಮೂಲಕ ಚಾಲನಾ ಪರವಾನಿಗೆ (ಡಿಎಲ್) ನೀಡುವ ಮೊದಲು ಚಾಲಕನ ಚಾಲನಾ ಪರಿಣಿತಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎಸ್.ಎನ್. ಸಿದ್ದರಾಮಪ್ಪ ಹೇಳಿದರು.‌

ವಿಜಯಪುರ ನಗರದ ಹಳೆಯ ಸಾರಿಗೆ ಇಲಾಖೆ ಆವರಣದಲ್ಲಿ 7 ಕೋಟಿ ವೆಚ್ಚದಲ್ಲಿ‌ ನಿರ್ಮಿಸಿರುವ ನೂತನ ಸುಸಜ್ಜಿತ ಪ್ರಾದೇಶಿಕ ಸಾರಿಗೆ ಕಚೇರಿ (RTO office) ಉದ್ಘಾಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘‘ಅಟೋಮೆಟಿಕ್​ ಡ್ರೈವಿಂಗ್ ಟ್ರ್ಯಾಕ್ ಪ್ರತ್ಯೇಕವಾಗಿರುವ ಕಾರಣ ಚಾಲನಾ ಪರವಾನಿಗೆ ನೀಡಲು ಚಾಲಕನ ಪರಿಣಿತಿಯನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಆತ ಮುಂದೆ ತನ್ನ ವಾಹನವನ್ನು ರಸ್ತೆಗೆ ಇಳಿಸಿದರೆ ಅಪಘಾತಗಳು ಕಡಿಮೆಯಾಗುವ ಉದ್ದೇಶದಿಂದ ಈ ಅಟೋಮೆಟಿಕ್ ಡ್ರೈವಿಂಗ್ ಟ್ರ್ಯಾಕ್ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಶೇ 30-40ರಷ್ಟು ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಅತಿ ಹೆಚ್ಚು ಬೈಕ್ ಸವಾರರಾಗಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಚಲಾವಣೆ ಮಾಡುತ್ತಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಅಪಘಾತ ತಡೆಗಟ್ಟಲು ಸಾರಿಗೆ ಇಲಾಖೆ ಜತೆ ಪೊಲೀಸ್ ಇಲಾಖೆ ಸಹ ಕೈ ಜೋಡಿಸಿದ್ದು, ಸಾಧ್ಯವಾದಷ್ಟು ಅಪಘಾತ ಪ್ರಕರಣ ತಡೆಗಟ್ಟಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ದಾಖಲೆಯ ರಾಜಸ್ವ ಸಂಗ್ರಹ: ಸಾರಿಗೆ ಇಲಾಖೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಯನ್ನು ರಾಜ್ಯ ಸರ್ಕಾರ ನೀಡಿದೆ. 2022-23 ಸಾಲಿನಲ್ಲಿ ವಿಜಯಪುರ ಜಿಲ್ಲೆಯ ಸಾರಿಗೆ ಇಲಾಖೆಯಿಂದಲೇ ಈಗಾಗಲೇ 1.34 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. ರಾಜ್ಯದಲ್ಲಿ ಸುಮಾರು 2.94 ಕೋಟಿ ವಾಹನ ನೋಂದಣಿಯಾಗಿವೆ. ಇದರಲ್ಲಿ ವಿಜಯಪುರ ಜಿಲ್ಲೆ ಒಂದರಲ್ಲೇ 6,40,700 ಲಕ್ಷ ವಾಹನ ನೋಂದಣಿಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್​, ‘‘ಜಿಲ್ಲೆಯಲ್ಲಿ ಅಪಘಾತ ಹೆಚ್ಚಾಗಲು ಹೆಲ್ಮೆಟ್ ರಹಿತ ವಾಹನ ಚಾಲನೆ ಮುಖ್ಯ ಕಾರಣವಾಗಿದೆ. ಇದನ್ನು ಮನಗಂಡು ನಮ್ಮ ಬಿಎಲ್​ಡಿಇ ಸಂಸ್ಥೆಯ ವತಿಯಿಂದ 17 ಸಾವಿರ ಯುವಕರಿಗೆ ಹೆಲ್ಮೆಟ್ ಉಚಿತವಾಗಿ ಕೊಡುವಂತಹ ಸುರಕ್ಷತಾ ಕಾರ್ಯಕ್ರಮವನ್ನು ಮಾಡಿದ್ದೆವು. ಮುಂದಿನ‌ ದಿನಗಳಲ್ಲಿಯೂ ಸಹ ಈ ಕಾರ್ಯ ಮುಂದುವರೆಸಲಾಗುವದು ಎಂದು ಹೇಳಿದರು. ಇದೇ ವೇಳೆ ವಿಜಯಪುರ ಜಿಲ್ಲೆ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದೆ, ಕೇವಲ ವಿಜಯಪುರ ನಗರದಲ್ಲಿ ಮಾತ್ರ ರಸ್ತೆ ಸಾರಿಗೆ ಕಚೇರಿ ಇದ್ದು. ಇದರಿಂದ ಜಿಲ್ಲೆಯ ಉಳಿದ ತಾಲೂಕಿನ ಜನರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಜಿಲ್ಲೆಯ ಯಾವುದಾದರೂ ಒಂದು ಒಳ್ಳೆಯ ತಾಲೂಕಿನಲ್ಲಿ ಇನ್ನೊಂದು ರಸ್ತೆ ಸಾರಿಗೆ ಕಚೇರಿ ಆರಂಭಿಸಬೇಕು ಎಂದರು.

ಇದನ್ನೂ ಓದಿ:ಗಡಿ ಭಾಗಕ್ಕೆ ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಮಾಡಿದ್ರೆ ನಾನ್ಯಾಕೆ ರಾಜೀನಾಮೆ ಕೊಡ್ಲಿ: ಸಿಎಂ ಪ್ರಶ್ನೆ

ABOUT THE AUTHOR

...view details