ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳ: ಹಸಿರು ತೋರಣದಿಂದ ಪರಿಸರ ರಕ್ಷಕ ಪ್ರಶಸ್ತಿ ಪ್ರಕಟ - ಹಸಿರು ತೋರಣ ಗೆಳೆಯರ ಬಳಗ

ಪರಿಸರಕ್ಕಾಗಿ ನಿರಂತರ ಶ್ರಮಿಸಿದ ಗಣ್ಯರನ್ನು ಹಸಿರು ತೋರಣ ಗೆಳೆಯರ ಬಳಗವು ಪರಿಸರ ರಕ್ಷಕ ಪ್ರಶಸ್ತಿ ನೀಡಿ ಸನ್ಮಾಸಲಿದೆ.

Environmental Protector
ಪರಿಸರ ರಕ್ಷಕ

By

Published : Jun 4, 2020, 7:28 AM IST

ಮುದ್ದೇಬಿಹಾಳ(ವಿಜಯಪುರ): ಪಟ್ಟಣದ ಹಸಿರು ತೋರಣ ಗೆಳೆಯರ ಬಳಗವು ಅರಣ್ಯ ಇಲಾಖೆ, ಪುರಸಭೆ ಮುದ್ದೇಬಿಹಾಳ ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 5 ರಂದು ಶುಕ್ರವಾರ ಬೆಳಗ್ಗೆ 7 ಗಂಟೆಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ಪರಿಸರಕ್ಕಾಗಿ ನಿರಂತರ ಶ್ರಮಿಸಿದ ಪ್ರಾದೇಶಿಕ ಅರಣ್ಯ ಇಲಾಖೆಯ ಕಾಶೀನಾಥ ಬಸಪ್ಪ ಉಳಾಗಡ್ಡಿ (ಹೊಕ್ರಾಣಿ), ದಶರಥ ಚಲವಾದಿ (ಗುಡಿಹಾಳ), ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ದಸ್ತಗೀರಸಾಬ ನಿಡಗುಂದಿ (ಢವಳಗಿ) ಹಾಗೂ ಬಾಳಪ್ಪ ಕಾನಕ್ಕಿ (ಹುನಕುಂಟಿ) ಇವರನ್ನು ಹಾಗೂ ವ್ಯಕ್ತಿ, ಸಂಘ ಸಂಸ್ಥೆಗಳ ವಿಭಾಗದಿಂದ ರಫೀಕ ಢವಳಗಿ, ಸಾಥಪ್ಪ ಗುರುಬಟ್ಟಿ ಹಾಗೂ ಸಾಹೇಬಗೌಡ ಬಿರಾದಾರ ಅವರಿಗೆ "ಪರಿಸರ ರಕ್ಷಕ" ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ತಹಶೀಲ್ದಾರ್ ಜಿ.ಎಸ್.ಮಳಗಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಸಾಮಾಜಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಸಂತೋಷ ಅಜೂರ, ಪ್ರಾದೇಶಿಕ ಅರಣ್ಯ ಇಲಾಖೆಯ ಅರಣ್ಯಾಧಿಕಾರಿ ಸುಭಾಸಚಂದ್ರ ಬಿ.ಕೆ., ಪಿಎಸ್ಐ ಮಲ್ಲಪ್ಪ ಮಡ್ಡಿ ಪಾಲ್ಗೊಳ್ಳಲ್ಲಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲ ಪರಿಸರ ಪ್ರೇಮಿಗಳನ್ನು ಆಹ್ವಾನಿಸಿ ಹಸಿರು ತೋರಣ ಗೆಳೆಯರ ಬಳಗದ ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details