ಮುದ್ದೇಬಿಹಾಳ (ವಿಜಯಪುರ):ಮದುವೆ ಸಮಾರಂಭದಲ್ಲಿ ಸಂಬಂಧಿಕರು, ಸ್ನೇಹಿತರು ವಿವಿಧ ಉಡುಗೊರೆಗಳನ್ನು ನವದಂಪತಿಗೆ ನೀಡುವುದು ಸಾಮಾನ್ಯ. ಆದರೆ ಇಲ್ಲೊಂದು ಜೋಡಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಕಾಳಜಿ ತೋರಿದ್ದಾರೆ.
ನವದಂಪತಿಯ ಪರಿಸರ ಪ್ರೀತಿ: ಹಾರೈಸಲು ಬಂದ ಅತಿಥಿಗಳಿಗೆ ಸಸಿ ಗಿಫ್ಟ್ - Environmental love of newsly married couple
ವಿಜಯಪುರದ ಮುದ್ದೇಬಿಹಾಳ ತಾಲೂಕಿನ ನವದಂಪತಿ ತಮ್ಮ ಮದುವೆಗೆ ಬಂದವರಿಗೆ ಸಸಿ ನೀಡುವ ಮೂಲಕ ವಿಶೇಷ ಪರಿಸರ ಕಾಳಜಿ ತೋರಿದ್ದಾರೆ.
ನವದಂಪತಿಯ ವಿನೂತನ ಪರಿಸರ ಪ್ರೀತಿ
ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಗಿರೀಶ್ ಗೌಡ ಪಾಟೀಲ್ ಅವರ ವಿವಾಹ, ಬಾಗಲಕೋಟೆ ಜಿಲ್ಲೆ ಭಗವತಿಯ ಲಕ್ಷ್ಮಿ ಅವರೊಂದಿಗೆ ಸರೂರದ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಜರುಗಿತು.
ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಕರಿಗೆ, ಸ್ನೇಹಿತರಿಗೆ, ಗ್ರಾಮಸ್ಥರಿಗೆ ಅಂದಾಜು 700 ಸಸಿಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಶೇಷ ಪರಿಸರ ಪ್ರೀತಿ ತೋರಿದರು. ನವದಂಪತಿ ಕೊಟ್ಟ ಸಸಿಗಳಲ್ಲಿ ಮಾವು, ನಿಂಬೆ, ನುಗ್ಗೆ, ಪೇರಲ ಸೇರಿದ್ದವು.
Last Updated : Jun 15, 2020, 6:05 PM IST