ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ - Vijayapura Ganesha statues News

ನನ್ನ ಗಿಡ ನನ್ನ ಭೂಮಿ ಎಂಬ ವಿನೂತನ ಸಂಘಟನೆಯ ಯುವಕರು ನಾನಾ ರೂಪದ ಗಣೇಶ ಮೂರ್ತಿಗಳನ್ನು ಒಂದೇ ಕಡೆ ಮಾರಾಟಕ್ಕೆ ಇಟ್ಟಿದ್ದಾರೆ.

ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ
ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

By

Published : Aug 17, 2020, 3:40 PM IST

ವಿಜಯಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದರ ಜತೆ ಹಲವು ಕರಾರುಗಳನ್ನ ಹಾಕಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ನಿಷೇಧಿಸಿದೆ. ಇದೇ ಕಾರಣಕ್ಕೆ ಚಿಕ್ಕದಾದ ಚೊಕ್ಕದಾದ ಮಣ್ಣಿನ ಗಣೇಶ ಮೂರ್ತಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಈ ಬೇಡಿಕೆ ಈಡೇರಿಸಲು ಸಂಘಟನೆಯೊಂದು ಕೈ ಜೋಡಿಸಿದೆ.

ನನ್ನ ಗಿಡ ನನ್ನ ಭೂಮಿ ಎಂಬ ವಿನೂತನ ಸಂಘಟನೆಯ ಯುವಕರು ನಾನಾ ರೂಪದ ಗಣೇಶ ಮೂರ್ತಿಗಳನ್ನು ಒಂದೇ ಕಡೆ ಮಾರಾಟಕ್ಕೆ ಇಟ್ಟಿದ್ದಾರೆ. ವಿವಿಧ ವೇಷ ತೊಟ್ಟ ಗಣೇಶ ನೋಡಲು ಅತ್ಯಾಕರ್ಷಕವಾಗಿವೆ. ಇವುಗಳಿಗೆ ಯಾವುದೇ ಬಣ್ಣ ಬಳಸಿಲ್ಲ ಪರಿಪೂರ್ಣವಾಗಿ ಮಣ್ಣಿನಿಂದ ತಯಾರಿಸಲಾಗಿದೆ. ಕಳೆದ ವರ್ಷದಿಂದ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಲು ಮಣ್ಣಿನ ಗಣೇಶಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮಣ್ಣಿನ ಗಣೇಶ ಮೂರ್ತಿಗಳಿಗೆ ಹೆಚ್ಚಿದ ಬೇಡಿಕೆ

ಈ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಚಿಕ್ಕ ಮೂರ್ತಿಗಳಿಗೆ ಅವಕಾಶ ನೀಡಲಾಗಿದೆ‌. ಇದಕ್ಕಾಗಿಯೇ ಈ ಸಂಘಟನೆ ಪರಿಸರ ಪ್ರೇಮಿ ಮಣ್ಣಿನ ಗಣೇಶನನ್ನು ಮಾರಾಟಕ್ಕೆ ಇಟ್ಟಿದೆ. ಇದರಲ್ಲಿ ಯಾವುದೇ ಹಣ ಗಳಿಸುವ ವ್ಯಾಪಾರ ದೃಷ್ಟಿ ಇಲ್ಲ, ಸಮಾಜದಲ್ಲಿ ಪರಿಸರದ ಮಹತ್ವ ತಿಳಿಸಲು ಈ ಹೊಸ ಐಡಿಯಾ ಮಾಡಿದ್ದಾರೆ.

ಕೊರೊನಾ ಮಹಾಮಾರಿಯಿಂದ ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲದ ಕಾರಣ ದೇವಸ್ಥಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗಿದೆ. ಸಾರ್ವಜನಿಕ ಗಣೇಶನ ಎತ್ತರ 4 ಅಡಿ ಹಾಗೂ ಮನೆ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ 2 ಅಡಿ ಎತ್ತರ ಇರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ ಕಾರಣ ಅದೇ ಮಾದರಿ ಗಣೇಶನನ್ನು ಮಾರಾಟಕ್ಕೆ ಇಡಲಾಗಿದೆ. ಈ ಗಣೇಶನ ಬೆಲೆ ಸಹ ಕಡಿಮೆ ಅಂತಾರೆ ಸಂಘಟನೆ ಸದಸ್ಯರು.

ಈ ಗಣೇಶನ ವಿಸರ್ಜನೆಯೂ ಸುಲಭವಾಗಿದೆ. ಮನೆಯಲ್ಲಿಯೇ ಬಕೆಟ್ ಇಲ್ಲವೇ ಬೇರೆ ಯಾವುದಾದರೂ ನೀರಿನಲ್ಲಿ ವಿಸರ್ಜನೆ ಮಾಡಿದರೆ, ಎರಡು ದಿನದಲ್ಲಿ ಕರಗಿ ಹೋಗುತ್ತದೆ. ಅದೇ ನೀರು ಮರಗಿಡಗಳಿಗೆ ಹಾಕಿ ಗೊಬ್ಬರ ರೀತಿ ಸಹ ಬಳಸಬಹುದು. ಗ್ರಾಹಕರು ಗಣೇಶ ಮೂರ್ತಿಗಳನ್ನು ಬಯಸಿದ ಸ್ಥಳಕ್ಕೆ ಡಿಲೇವರಿ ಪಡೆದುಕೊಂಡು, ಅಲ್ಲಿಂದ ತಮ್ಮ, ತಮ್ಮ ಮನೆಗೆ ಗಣೇಶನನ್ನು ಕರೆದುಕೊಂಡು ಹೋಗಬಹುದು.

ABOUT THE AUTHOR

...view details