ಕರ್ನಾಟಕ

karnataka

ETV Bharat / state

ತುರ್ತು ಸೇವೆ ನೀಡುತ್ತಿರುವ ಆ್ಯಂಬುಲೆನ್ಸ್ ಸಿಬ್ಬಂದಿ.. ಅಗತ್ಯ ಸೌಲಭ್ಯಗಳ ನಿರೀಕ್ಷೆ!! - ಕೋವಿಡ್ ಆಸ್ಪತ್ರೆ

ಆ್ಯಂಬುಲೆನ್ಸ್ ಡ್ರೈವರ್ ಹಾಗೂ ಸ್ಟಾಫ್ ನರ್ಸ್‌ಗಳಿಗೆ ರಜೆ ಸಿಗುತ್ತಿಲ್ಲ. ಹೊಟೇಲ್​ನಲ್ಲಿ ಉಳಿದುಕೊಂಡು ಮನೆಯವರಿಂದ ದೂರವಿದ್ದು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ.

ambulace drivers
ambulace drivers

By

Published : May 9, 2020, 12:52 PM IST

ವಿಜಯಪುರ :ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ವಿರುದ್ಧ ದಿನದ 24 ಗಂಟೆಗಳ ಕಾಲ ಆ್ಯಂಬುಲೆನ್ಸ್ ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಭೀತಿ ಆರಂಭವಾದ ದಿನದಿಂದಲೂ ಈ ಕೊರೊನಾ ವಾರಿಯರ್ಸ್‌ ತಮ್ಮ ಮನೆಗಳನ್ನು ತೊರೆದು ಜನ ಸೇವೆ ಮಾಡುತ್ತಿದ್ದಾರೆ.

ದಿನದ 24 ಗಂಟೆ ಸೇವೆಯಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿ..

ಕೋವಿಡ್-19 ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಮಾಡುವವರು, ಶಿಫ್ಟ್ ಆಧಾರದ ಮೇಲೆ ಕೆಲಸ ಮಾಡಿ ಮನೆಗೆ ಹೋಗ್ತಾರೆ. ಆದರೆ, ಆ್ಯಂಬುಲೆನ್ಸ್ ಡ್ರೈವರ್ ಹಾಗೂ ಸ್ಟಾಫ್ ನರ್ಸ್‌ಗಳಿಗೆ ರಜೆ ಸಿಗುತ್ತಿಲ್ಲ. ಹೋಟೆಲ್​ನಲ್ಲಿ ಉಳಿದುಕೊಂಡು ಮನೆಯವರಿಂದ ದೂರವಿದ್ದು, ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಮನೆಯವರೊಂದಿಗೆ ವಿಡಿಯೋ ಕಾಲ್ ಮೂಲಕವೇ ಮಾತನಾಡುತ್ತಾರೆ.

ಗುತ್ತಿಗೆ ಆಧಾರದ ಮೇಲೆ ಸರ್ಕಾರ ಆ್ಯಂಬುಲೆನ್ಸ್ ಸಿಬ್ಬಂದಿಯನ್ನು ನೇಮಿಸಿದೆ. ಇವರಿಗೆ ಕಾಲಕ್ಕೆ ಸರಿಯಾಗಿ ಸಂಬಳ ಹಾಗೂ ಸೌಲಭ್ಯ ಕೂಡಾ ಸರಿಯಾಗಿ ಸಿಗುತ್ತಿಲ್ಲ. ಕೊರೊನಾ ವಾರಿಯಾರ್ಸ್​ಗಳಾಗಿ ಸೇವೆ ಸಲ್ಲಿಸುತ್ತಿರುವ ಇವರು ಇದೀಗ ಸರ್ಕಾದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ABOUT THE AUTHOR

...view details